ಬೆಂಗಳೂರು: ಈಗಿನ ಬಿಜಿ ಲೈಫ್ ನಲ್ಲಿ ಜನ ತಮ್ಮ ಲೈಫ್ ಪಾರ್ಟ್ನರ್ ಹುಡುಕೋದು ಕೂಡ ಆನ್ ಲೈನ್ ಗಳಲ್ಲೇ. ಮ್ಯಾಟ್ರಿ ಮೋನಿಯಲ್ ವೆಬ್ ಸೈಟ್ಗಳಲ್ಲಿ ವಧು- ವರರನ್ನು ಹುಡೋಕೋರು ಸದಾ ಎಚ್ಚರವಾಗಿರಬೇಕು. ಇಲ್ಲಾಂದ್ರೆ ನೀವು ವಂಚನೆಗೊಳಗಾಗೋದು ಪಕ್ಕಾ ಯಾಕಂದ್ರೆ ವಂಚಕರು ಅಪ್ಡೇಟ್ ಆಗಿದ್ದು ಆನ್ ಲೈನ್ ನಲ್ಲಿ ವಧು- ವರರನ್ನು ಹುಡುಕೋರನ್ನೇ ಟಾರ್ಗೆಟ್ ಮಾಡ್ತಿದ್ದಾರೆ… ಈ ಸಂಬಂಧ ಒಂದು ಸ್ಟೋರಿ ತೋರಿಸ್ತೀವಿ ನೋಡಿ…
ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಸದ್ಬಳಕ್ಕೆಕ್ಕಿಂತ ದುರ್ಬಳಕೆ ಮಾಡೋರ ಸಂಖ್ಯೆ ಜಾಸ್ತಿಯಾಗ್ತಿದೆ.ಹೌದು.ವೈವಾಹಿಕ ಸಂಬಂದಕ್ಕೆ ವೇದಿಕೆಯಾಗಿರುವ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ನಕಲಿ ಫ್ರೊಫೈಲ್ ರಚಿಸಿ ಯುವತಿಯನ್ನ ಪರಿಚಯಿಸಿಕೊಂಡು ಮದುವೆ ಮಾಡಿಕೊಳ್ಳುವ ಸೋಗಿನಲ್ಲಿ ವಂಚಿಸುತ್ತಿದ್ದ ವಂಚಕನನ್ನ ಜೆಪಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೂಲದ ದೀಪಕ್ ಬಂಧಿತ ಆರೋಪಿ. ಬಿಎಸ್ಸಿ ಮಾಡಿಕೊಂಡಿರುವ ಈತ ಈ ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಸುಲಭವಾಗಿ ಹಣ ಸಂಪಾದಿಸ ಬೇಕು ಅಂತ 10 ವರ್ಷದ ಹಿಂದೆ ನಗರಕ್ಕೆ ಬಂದವನು ನಿರುದ್ಯೂಗಿ ಯುವಕರಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ. ಇದೇ ರೀತಿ ವಿಧವೆ ಆಥವಾ ಒಂಟಿ ಮಹಿಳೆಯನ್ನ ಟಾರ್ಗೆಟ್ ಮಾಡಿಕೊಂಡು ಫೇಸ್ ಬುಕ್ ನಲ್ಲಿ ನಕಲಿ ಫೇಜ್ ತೆರೆದು ಅಪರಿಚಿತರ ಫೋಟೊ ಬಳಸಿಕೊಂಡು ತಾನೇ ಎಂದು ಬಿಂಬಿಸುತ್ತಿದ್ದ. ನಂತರ ಅಮಾಯಕ ಮಹಿಳೆಯರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸುತ್ತಿದ್ನಂತೆ..
ಇತ್ತೀಚೆಗೆ ಜೆ.ಪಿ.ನಗರದಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ ಮಹಿಳೆ ಕಳೆದ ಫೆಬ್ರುವರಿಯಲ್ಲಿ ವಿವಾಹ ಮಾಡಿಕೊಳ್ಳಲು ವರನನ್ನ ಹುಡುಕುವ ಸಲುವಾಗಿ ಮ್ಯಾಟ್ರಿ ಮೋನಿ ಆ್ಯಪ್ ನಲ್ಲಿ ಲಾಗಿನ್ ಆಗಿದ್ರು. ಈ ವೇಳೆ ದೀಪಕ್ ಎನ್ನುವರ ಪ್ರೊಫೈಲ್ ನೋಡಿ ಕಾಂಟ್ಯಾಕ್ಟ್ ಮಾಡಿದ್ದಾರೆ… ಆಗ ದೀಪಕ್ ಅನ್ನೋನು ತಾನು ತಮಿಳುನಾಡಿನ ಮದುರೈಯ ಎಸ್ ಬಿಐ ಬ್ಯಾಂಕ್ ನಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಇಬ್ಬರೂ ವಾಟ್ಸಾಪ್ಸ್ ಮೂಲಕ ತಮ್ಮ ಬಯೋಡೇಟಾ ಹಂಚಿಕೊಂಡಿದ್ದಾರೆ…. ಬಳಿಕ ಮಹಿಳೆಯನ್ನ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ರಿಂದ ಪರಸ್ಪರ ಇಬ್ಬರು ಕರೆ ಮಾಡಿ ಮಾತನಾಡಿಕೊಳ್ತಿದ್ರು. ಈ ಮಧ್ಯೆ ತನ್ನ ವ್ಯಾಲೆಟ್ ಕಳೆದುಕೊಂಡಿದ್ದು ಹಣ ಬೇಕಾಗಿದೆ ಎಂದು ಮಹಿಳೆಯಿಂದ 30 ಸಾವಿರ ಹಣ ಪಡೆದುಕೊಂಡಿದ್ದ.
ಅಲ್ಲದೆ ತಾನು ಬಳಸುತ್ತಿರುವ ಸಿಮ್ ಬ್ಯಾಂಕ್ ನವರಾದ್ದಾಗಿದ್ದು ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ಹೀಗಾಗಿ ಸಿಮ್ ಖರೀದಿಸುವಂತೆ ಬೇಡಿಕೆಯಿಟ್ಟಿದ್ದ. ಇದನ್ನ ನಂಬಿದ ಮಹಿಳೆಯು ಸಿಮ್ ಖರೀದಿಸಿದ್ದಳು. ಸಿಮ್ ತೆಗೆದುಕೊಳ್ಳಲು ಆಫೀಸ್ ಬಾಯ್ ಕಳುಹಿಸುವುದಾಗಿ ನಂಬಿಸಿ ತಾನೇ ಯುವತಿಯಿಂದ ಸಿಮ್ ಪಡೆದಿದ್ದ. ಸಿಮ್ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಸ್ನೇಹಿತರ ಬಳಿ ಈ ವಿಚಾರದ ಬಗ್ಗೆ ಹೇಳಿದಾಗ ತಾನು ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ತನ್ನ ಹೆಸರಿನಲ್ಲಿ ಖರೀದಿಸಿದ ಸಿಮ್ ಬ್ಲಾಕ್ ಮಾಡಿಸಿದ್ದರು.
ಆನ್ ಲೈನ್ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವ ದೀಪಕ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.. ಇನ್ನು ವಂಚಿಸುವ ಕಾಯಕವನ್ನ ಸಿದ್ದಿಸಿಕೊಂಡಿದ್ದ ದೀಪಕ್ ದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ಮಧು- ವರರನ್ನು ಹುಡುಕೋರು ಎಷ್ಟು ಎಚ್ಚರವಾಗಿರ್ತೀರೋ ಅಷ್ಟೋ ಒಳ್ಳೆಯದು ಇಲ್ಲಾಂದ್ರೆ ನಷ್ಟ ಮತ್ತು ದುಖಃ ಕಟ್ಟಿಟ್ಟ ಬುತ್ತಿ.