ಬೆಂಗಳೂರು: ಆದಿಚುಂಚನಗಿರಿ ಶ್ರೀಗಳನ್ನು ನಾವು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ನವರು ವಿಲ ವಿಲ ಎಂದು ಒದ್ದಾಡಿ ಬಿಟ್ಟಿದ್ದಾರೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳನ್ನು ನಾವು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ನವರು ವಿಲ ವಿಲ ಎಂದು ಒದ್ದಾಡಿ ಬಿಟ್ಟಿದ್ದಾರೆ.
ಒಕ್ಕಲಿಗ ಸಮುದಾಯ, ಬಿಜೆಪಿ– ಜೆಡಿಎಸ್ ಜೊತೆ ಹೋಗುತ್ತದೆ ಎಂಬ ಭಯದಿಂದ ಸರ್ಕಾರ ಬೀಳಿಸಿದವರು ಎಂಬ ನಿರಾಧಾರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ದೇವೇಗೌಡರನ್ನು ಕೆಳಗೆ ಇಳಿಸಿದವರು ಯಾರು?, ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ಇಳಿಸಿದವರು ಯಾರು ಎಂದು ಗೊತ್ತಿದೆ. ಸೋಲಿನ ಭೀತಿಯಿಂದ ಕೊಟ್ಟ ಹೇಳಿಕೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.