ಜಸ್ಪ್ರೀತ್ ಬುಮ್ರಾ ಅವರು RCB V/s MI ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಆರ್ಸಿಬಿ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂದೆನಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು -ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್- ಎಂಐ ಏಳು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಪ್ರಮುಖ ಕ್ರೆಡಿಟ್ ಸ್ಟಾರ್ ವೇಗ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ.
ಅದ್ಭುತ ಶೈಲಿಯಲ್ಲಿ ಪಂದ್ಯವನ್ನು ಪ್ರಾರಂಭಿಸಿದ ಜಸ್ಪ್ರೀತ್ ಬುಮ್ರಾ (Jasprit Bumrah), ಅವರ ಮೊದಲ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದರು. ನಂತರ ತಮ್ಮ ಮೂರನೇ ಓವರ್ನಲ್ಲಿ ನಿನ್ನೆಯ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಸಿಡಿಸುವಲ್ಲಿ ಯಶಸ್ವಿಯಾದ ಫಾಫ್ ಡು ಪ್ಲೆಸಿಸ್ ಬಳಿಕ ಮಹಿಪಾಲ್ ಲೊಮ್ರೋರ್ ಅವರನ್ನು ಬ್ಯಾಕ್-ಟು-ಬ್ಯಾಕ್ ಔಟ್ ಮಾಡಿದ. ಆರ್ಸಿಬಿ ಇನ್ನಿಂಗ್ಸ್ ನ 19ನೇ ಓವರ್ನಲ್ಲಿ ಸೌರವ್ ಚೌಹಾಣ್ ಮತ್ತು ವಿಜಯ್ ಕುಮಾರ್ ವೈಶಾಕ್ ಅವರ ವಿಕೆಟ್ಗಳನ್ನು ಉರುಳಿಸಿದರು.
ಹೀಗೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ಗಳನ್ನು ಪಡೆದ ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಐದು ವಿಕೆಟ್ಗಳನ್ನು ಪಡೆದ ಮುಂಬೈ ಇಂಡಿಯನ್ಸ್ ತಂಡದ ಮೊದಲ ಬೌಲರ್, ಐಪಿಎಲ್ನ ನಾಲ್ಕನೇ ಬೌಲರ್ ಎಂದೆನಿಸಿಕೊಂಡರು.