ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ಸಾಮಾನ್ಯವಾಗಿ, ನೀವು ಅಡುಗೆಮನೆಯಲ್ಲಿ ಮಧ್ಯಮ ಕೋಣೆಯ ಉಷ್ಣಾಂಶದಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುತ್ತೀರಿ.
ಆದರೆ ಅನೇಕರಿಗೆ ತಿಳಿದಿರದ ವಿಷಯವೆಂದರೆ ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಕಾಲ ನಿಂಬೆಹಣ್ಣುಗಳನ್ನು ಇಡುವುದರಿಂದ ಅದು ಗಟ್ಟಿಯಾಗುತ್ತವೆ. ಇದನ್ನು ತಪ್ಪಿಸಲು, ನೀವು ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಸಲಹೆಗಳು ಇಲ್ಲಿವೆ.
ಗಾಜಿನ ಜಾರ್:
ನಿಂಬೆಹಣ್ಣನ್ನು ನೀರು ತುಂಬಿಸಿಟ್ಟ ಗಾಜಿನ ಜಾರ್ ಒಳಗಡೆ ಸಂಗ್ರಹಿಸಿಡಿ. ಇದು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ. ಎಲ್ಲಾ ನಿಂಬೆಹಣ್ಣುಗಳನ್ನು ನೀರಿನಿಂದ ತುಂಬಿದ ಜಾರ್ನಲ್ಲಿ ಇಟ್ಟು, ರೆಫ್ರಿಜರೇಟರ್ನಲ್ಲಿ ಇರಿಸಿ. ಇದು ತುಂಬಾ ದಿನಗಳವರೆಗೆ ತಾಜಾ ಮತ್ತು ರಸಭರಿತವಾಗಿರಿಸುತ್ತದೆ.
ಈ ಹಣ್ಣಿನೊಂದಿಗೆ ಇಡಬೇಡಿ:
ಸೇಬು ಮತ್ತು ಬಾಳೆಹಣ್ಣಿನೊಂದಿಗೆ ಎಂದಿಗೂ ನಿಂಬೆಯನ್ನು ಸಂಗ್ರಹಿಸಿ ಇಡಬೇಡಿ. ಸೇಬು ಹಾಗೂ ಬಾಳೆಹಣ್ಣಿನಲ್ಲಿ ಎಥಿಲೀನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ಇದು ಆಮ್ಲೀಯ ಹಣ್ಣುಗಳು ಬೇಗ ಹಾಳಾಗಲು ಕಾರಣವಾಗುತ್ತದೆ.
ಯಾವಾಗಲೂ ಜಿಪ್-ಲಾಕ್ ಬ್ಯಾಗ್ನಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುವ ಅಭ್ಯಾಸ ಮಾಡಿಕೊಳ್ಳಿ. ಬ್ಯಾಗ್ನಿಂದ ಸಾಧ್ಯವಾದಷ್ಟು ಗಾಳಿಯನ್ನು ತೆಗೆದು ನಿಂಬೆ ಹಣ್ಣುಗಳನ್ನು ಅದರಲ್ಲಿಡಿ. ಹೀಗೆ ಮಾಡುವುದರಿಂದ ನಿಂಬೆಹಣ್ಣು ರಸ ಮತ್ತು ಪರಿಮಳವನ್ನು ನಾಲ್ಕು ವಾರಗಳವರೆಗೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಕತ್ತರಿಸಿದ ನಿಂಬೆಹಣ್ಣನ್ನು ಇಡಲು ಬಯಸಿದರೆ, ನಿಂಬೆಯನ್ನು ಸಣ್ಣ ತಟ್ಟೆಯಲ್ಲಿ ಇರಿಸಿ ಪ್ಲಾಸ್ಟಿಕ್ ಕವರ್ ಸುತ್ತಿ ಅದನ್ನು ಏರ್ ಟೈಟ್ ಡಬ್ಬದಲ್ಲಿ ಹಾಕಿ ರೆಫ್ರಿಜರೇಟರ್ನಲ್ಲಿಡಿ.
- ನೀರು ತುಂಬಿದ ಗಾಜಿನ ಜಾರ್ನಲ್ಲಿ ನಿಂಬೆಹಣ್ಣುಗಳನ್ನು ಹಾಕಿ ಫ್ರಿಜ್ನಲ್ಲಿಡುವುದು ತುಂಬಾ ಸರಳವಾದ ಟ್ರಿಕ್.
- ಎಥಿಲೀನ್ ಅನ್ನು ಹಣ್ಣು ಮಾಡುವ ಹಾರ್ಮೋನ್ ಎಂದು ಕರೆಯಲಾಗುತ್ತದೆ. ನಿಂಬೆಹಣ್ಣು ಎಥಿಲೀನ್ ಕಾರಣದಿಂದ ತುಂಬಾ ಬೇಗ ಹಾಳಾಗುತ್ತದೆ. ಆದ್ದರಿಂದ, ಏಪ್ರಿಕಾಟ್, ಸೇಬು, ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು ಹೊರಸೂಸುವ ಎಥಿಲೀನ್ ಬಳಿ ನಿಂಬೆಹಣ್ಣುಗಳನ್ನು ಎಂದಿಗೂ ಇಡಬೇಡಿ.
- ನಿಂಬೆಹಣ್ಣುಗಳನ್ನು ಖರೀದಿಸುವಾಗ ತೆಳು ಸಿಪ್ಪೆಯ ಹಣ್ಣುಗಳನ್ನು ಆರಿಸಿಕೊಳ್ಳಿ, ದಪ್ಪ ಸಿಪ್ಪೆಯ ನಿಂಬೆಗಿಂತ ಇವುಗಳಲ್ಲಿ ಹೆಚ್ಚು ರಸವಿರುತ್ತದೆ. ನಿಂಬೆಹಣ್ಣುಗಳು ಹಸಿರಾಗಿದರೆ ಹೆಚ್ಚ ದಿನ ಕೆಡದೆ ಉಳಿಯುತ್ತವೆ.
ಗಾಳಿಯಾಡದ ಚೀಲ ಬಳಸಿ:
ನಿಂಬೆಹಣ್ಣುಗಳನ್ನು ಹಾಳಾಗದಂತೆ ಸಂಗ್ರಹಿಸಿಡಲು ಸೀಲ್ ಮಾಡಿದ ಅಥವಾ ಗಾಳಿಯಾಡದ ಚೀಲದೊಳಗೆ ಇರಿಸಿ. ಇದರಿಂದಾಗಿ ನಿಂಬೆಹಣ್ಣುಗಳು ರಸ ಮತ್ತು ಪರಿಮಳವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಪ್ಲಾಸ್ಟಿಕ್ ಕಂಟೈನರ್ ಬಳಸಿ:
ನಿಂಬೆಹಣ್ಣನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್ನಲ್ಲಿ ಹಾಕಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದ ವರೆಗೆ ನಿಂಬೆಹಣ್ಣನ್ನು ತಾಜಾವಾಗಿರಿಸುತ್ತದೆ