69 ವರ್ಷದ ಸ್ಪೇನ್ ನ ನಟಿ ಅನಾ ಒಬ್ರೆಗಾನ್ ನ 27 ವರ್ಷದ ಮಗ ಅಲೆಸ್ ಲೆಕ್ವಿಯೊ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಸಾಯುವ ಮೊದಲು ತಂದೆಯಾಗಬೇಕೆಂದು ಕನಸು ಕಂಡಿದ್ದ. ಅದರಂತೆ ಆತನ ಮರಣಕ್ಕೂ ಮೊದಲು ಆರೋಗ್ಯ ಕೇಂದ್ರದಲ್ಲಿ ವೀರ್ಯವನ್ನು ಸಂಗ್ರಹಿಸಲಾಗಿತ್ತು.
ಅಲೆಸ್ ಲೆಕ್ವಿಯೊ ಮರಣದ ನಂತರ ಬಹಳ ಸಮಯದವರೆಗೆ ಅವನ ತಾಯಿಗೆ ಮಗನ ಕೊನೆಯ ಆಸೆ ತಿಳಿದಿರಲಿಲ್ಲ. ಇದರೊಂದಿಗೆ ಅಲೆಸ್ ಲೆಕ್ವಿಯೊ ವೀರ್ಯ ಸಂಗ್ರಹದ ಬಗ್ಗೆ ಅವಳು ತಿಳಿದುಕೊಂಡು, ಬಳಿಕ ತನ್ನ ಮಗನ ಆಸೆ ಪೂರೈಸಲು ನಿರ್ಧರಿಸಿದಳು.
ಅದರಂತೆ ಹಲವು ವೈದ್ಯರನ್ನು ಸಂಪರ್ಕಿಸಿ, ಮಗನ ವೀರ್ಯದ ಮೂಲಕ ಮಗುವಿಗೆ ಜನ್ಮ ನೀಡಬೇಕೆಂದುಕೊಂಡಳು. ಕಳೆದ ವರ್ಷ ವೈದ್ಯರ ಬಳಿಗೆ ಹೋಗಿ ಎಲ್ಲಾ ಅಗತ್ಯ ಔಪಚಾರಿಕತೆ ಪೂರ್ಣಗೊಳಿಸಿದರು. ತನ್ನ ಜೀವಕ್ಕೆ ಅಪಾಯವಿದ್ದರೂ ಮಗನ ವೀರ್ಯಾಣುನೊಂದಿಗೆ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿಗೆ ಅನಿತಾ ಎಂದು ಹೆಸರಿಟ್ಟಿದ್ದಾಳೆ ಅನಾ ಒಬ್ರೆಗಾನ್. ಮಗುವಿನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ಪೋಸ್ಟ್ ಮಗುವಿನ ತಂದೆಯ ಬಗ್ಗೆ ಬರೆದಿತ್ತು.. ‘ಅನಿತಾ, ನೀನು ಈಗಷ್ಟೇ ಒಂದು ವರ್ಷ ಪೂರೈಸಿದ್ದೀಯಾ. ಗಾಢವಾದ ಕತ್ತಲೆಯಲ್ಲಿ ತುಂಬಿ ನೋವಿನಲ್ಲಿ ಮುಳುಗಿದ್ದ ನನ್ನ ಮನದಾಳದಲ್ಲಿ ನನೀನು ಬೆಳಕನ್ನು ತುಂಬಿದ್ದೀಯಾ.. ನಿನ್ನ ನಗು ಮುತ್ತು, ನವಿರಾದ ಹೆಜ್ಜೆಗಳೇ ಸಾಕು ನನಗೆ.. ನಿನ್ನ ತಂದೆಯಂತೆಯೇ ಪ್ರೀತಿಯಿಂದ ನನ್ನನ್ನು ನೋಡಿದ್ದಕ್ಕೆ ಧನ್ಯವಾದಗಳು..ಇಲ್ಲಿಯವರೆಗೆ ಯಾರೂ ನನ್ನನ್ನು ಹಾಗೆ ನೋಡಿಲ್ಲ’ಎಂದು ಭಾವುಕಳಾಗಿ ಪೋಸ್ಟ್ನಲ್ಲಿ ಹೇಳಿದ್ದಾಳೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.