ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದ ಅಖಾಡಕ್ಕೆ ಭಾನುವಾರ ಪ್ರಧಾನಿ ಮೋದಿ ಧುಮುಕಲಿದ್ದಾರೆ. ಚುನಾವಣೆ ಘೋಷಣೆ ದಿನ ಮಲ್ಲಿಕಾರ್ಜುನ ಖರ್ಗೆತವರಲ್ಲಿ ರಣಕಹಳೆ ಮೊಳಗಿಸಿದ್ದ ಮೋದಿ, ಿಂದು ಸಿಎಂ ಸಿದ್ದರಾಮಯ್ಯ ಅಡ್ಡಾದಲ್ಲಿ ಸದ್ದು ಮಾಡಲಿದ್ದಾರೆ.
ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿ (Mangaluru) ಭರ್ಜರಿ ರೋಡ್ಶೋ (Road Show) ನಡೆಸಲಿದ್ದಾರೆ. ಮೋದಿ ಪ್ರವಾಸ ಪಟ್ಟಿಯಲ್ಲಿ ಸಣ್ಣ ಬದಲಾವಣೆಯಾಗಿದ್ದು ಮಂಗಳೂರು ರೋಡ್ಶೋ 15 ನಿಮಿಷ ತಡವಾಗಲಿದೆ. ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಮೈಸೂರು, ಮಂಗಳೂರು ಕೇಸರಿಮಯವಾಗಿದೆ.
ಮೈಸೂರಿನಲ್ಲಿ ಸಮಾವೇಶ:
ಸಂಜೆ 4 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಸಂಜೆ 4:30 – ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಕೇಂದ್ರಿಕರಿಸಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಂಜೆ 6:30 ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಸಂಜೆ 6:45 – ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಆರಂಭವಾಗಲಿದೆ. 1.5 ಕಿ.ಮೀ ದೂರದಲ್ಲಿರುವ ನವಭಾರತ ವೃತ್ತದಲ್ಲಿ ರೋಡ್ ಶೋ ಕೊನೆಯಾಗಲಿದೆ.