ಬೆಂಗಳೂರು: ಐಪಿಎಲ್ ಅನ್ನೋದು ಕ್ರಿಕೆಟ್ ಪ್ರೇಮಿಗಳ ಹಬ್ಬ.. ಆದ್ರೆ ಕೆಲವರಿಗೆ ಅದು ಬ್ಯುಸಿನೆಸ್.. ಬೆಟ್ಟಿಂಗ್ ಮಾಡೋರಿಗೆ ದೊಡ್ಡ ಬ್ಯುಸಿನೆಸ್.. ಇದರ ಜೊತೆಗೆ ಟಿಕೆಟ್ ವಿಚಾರದಲ್ಲೂ ಸ್ಕ್ಯಾಮ್ ನಡಿತಿರೋ ಆರೋಪ ಕೇಳಿ ಬಂದಿದೆ.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಇದ್ರೆ ಸಾಕು ಕೌಂಟರ್ ನಲ್ಲಿ ಟಿಕೆಟ್ ಸಿಗದೇ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.. ಇದು ಕ್ರೀಡಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ ಏನಿದು ಬ್ಲಾಕ್ ಟಿಕೆಟ್ ಸ್ಕ್ಯಾನ್. ಈ ಸ್ಟೋರಿ ನೋಡಿ..
ಐಪಿಎಲ್ ಒಂದು ಹಬ್ಬ.. ಕ್ರಿಕೆಟ್ ಪ್ರೇಮಿಗಳು ವರ್ಷಕ್ಕೊಂದು ಬಾರಿ ಬರೋ ಈ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಕಾದು ಕುಳಿತಿರ್ತಾರೆ.. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಹೇಳ್ಬೇಕಾ..? ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಇದ್ರೆ ಕ್ರಿಕೆಟ್ ಅಭಿಮಾನಿ ಗಳಿಗೆ ಹಬ್ಬವು ಹಬ್ಬ ಬೇಲೇ .. ಎಷ್ಟೇ ಆದ್ರೂ ಪರ್ವಾಗಿಲ್ಲ ಟಿಕೆಟ್ ತಗೊಂಡ್ ಮ್ಯಾಚ್ ನೋಡ್ಬೇಕು ಗುರು ಅನ್ನೋ ಅಭಿಮಾನಿಗಳು ಸಾವಿರಾರು ಜನ..
ಈ ಸೀಜನ್ ನಲ್ಲಿ ಆರ್ ಸಿಬಿ ಬ್ಯಾಕ್ ಟು ಬ್ಯಾಕ್ ಸೋಲ್ತಿದ್ರೂ ಬೆಂಗಳೂರು ಮ್ಯಾಚ್ ನೋಡೋಕೆ ಜನ ಕಾಯ್ತಿರ್ತಾರೆ.. ರೆಡ್ ಆರ್ಮಿ ಆಟ ನೋಡೋಕೆ ಸ್ಟೇಡಿಯಂ ಗೆ ಜನ ದೊಡ್ಡ ಮಟ್ಟದಲ್ಲಿ ಬರ್ತಾರೆ.. ಇದನ್ನೇ ಬಂಡವಾಳವಾಗಿಟ್ಕೊಂಡು ಆರ್ಸಿಬಿ ಮ್ಯಾನೇಜ್ಮೆಂಟ್ ನಲ್ಲಿ ಟಿಕೆಟ್ ಸೇಲಿಂಗ್ ಸ್ಕ್ಯಾಮ್ ನಡೆಸಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ.. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ ಸಿಬಿ ಮ್ಯಾಚ್ ಇದ್ದಾಗ ಟಿಕೆಟ್ ವಿಚಾರದಲ್ಲಿ ಸ್ಕ್ಯಾಮ್ ನಡೆಸಲಾಗ್ತಿದೆ ಅಂತಾ ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾನೆ..
ಆರ್ ಸಿಬಿ ಅಭಿಮಾನಿಯೊಬ್ಬ ಬೆಂಗಳೂರಿನಲ್ಲಿ ನಡೆಯೋ ನೆಕ್ಸ್ಟ್ ಮ್ಯಾಚ್ ಗೆ ಟಿಕೆಟ್ ಪಡೆಯೋಕೆ ಮುಂದಾಗಿದ್ದ.. ವಿನಯ್ ಎಂಬಾತನ ಕಾಂಟ್ಯಾಕ್ಟ್ ಸಿಕ್ಕಿದ್ದು ಆತನಿಂದ ಟಿಕೆಟ್ ಪಡೆಯೋಕೆ ಟೆಕ್ಸ್ಟ್ ಮಾಡಿದ್ದಾನೆ.. ಈ ವೇಳೆ ವಿನಯ್ ಟಿಕೆಟ್ ರೇಟನ್ನ ಡಬಲ್ ಹೇಳಿದ್ದು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಇದೊಂದು ಸ್ಕ್ಯಾಮ್.. ಟಿಕೆಟ್ ಸೆಲಿಂಗ್ ಹೀಗೆ ಆಗ್ತಿದೆ ಅಂತಾ ವಿನಯ್ ಎಂಬಾತ ಗಂಬೀರ ಆರೋಪ ಮಾಡಿದ್ದಾನೆ..
ಈ ಬಗ್ಗೆ ವಿನಯ್ ಎಂಬಾತನ ಜೊತೆ ಚಾಟ್ ಮಾಡಿರೋದ್ರ ಸ್ಕ್ರೀನ್ ಶಾಟ್ ಅನ್ನ ಜೋಕ್ಸ್ ಎಂಬಾತ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಈ ಬಗ್ಗೆ ಪಕ್ಕಾ ಮಾಹಿತಿಯ ಜೊತೆ ಲಿಖಿತ ದೂರು ಕೊಟ್ರೆ ಖಂಡಿತ ಕ್ರಮ ಕೈಗೊಳ್ತೀವಿ ಎಂದಿದ್ದಾರೆ..
ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗ್ತಿದ್ದು. ಇನ್ನೂ ಲಿಖಿತ ರೂಪದಲ್ಲಿ ಯಾವುದೇ ಕಂಪ್ಲೆಂಟ್ ಆಗಿಲ್ಲ.. ಮ್ಯಾಚ್ನ ಪ್ರತಿ 60 ಶೇಕಡ ಟಿಕೆಟ್ಗಳು ಬುಕ್ ಮೈ ಶೋನಲ್ಲಿ ಸೇಲ್ ಆಗ್ತಿದ್ದಾವೆ ಉಳಿದ ಟಿಕೆಟ್ ಕೌಂಟರ್ ನಲ್ಲಿ ಸಿಗುವುದು ಕಷ್ಟವಾಗಿದೆ ಇದನ್ನೇ ಬಂಡವಾಳ ಮಾಡಿಕೊಂಡ ಮ್ಯಾನೇಜ್ಮೆಂಟ್ ಈ ರೀತಿ ಬ್ಲಾಕ್ ನಲ್ಲಿ ಟಿಕೆಟ್ ಮಾರಲು ಮುಂದಾದ್ರ ಅನ್ನೋ ಅನುಮಾನ ಮೂಡಿದೆ. ಈ ಸ್ಕ್ಯಾಮ್ ನಿಜಕ್ಕೂ ಆಗ್ತಿದ್ರೆ ಪೊಲೀಸರ ತನಿಖೆಯಿಂದಲೇ ಸತ್ಯಾ ಗೊತ್ತಾಗಬೇಕಿದೆ..