ಬೆಂಗಳೂರು: ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮತದಾರರ ಅಂತಿಮ ಪಟ್ಟಿ ರೆಡಿಯಾಗಿದೆ. ರಾಜ್ಯದಲ್ಲಿ 5.37 ಕೋಟಿ ಮತದಾರರು ಇದ್ದಾರೆ. ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದು, ” ಕರಡು ಮತದಾರರ ಪಟ್ಟಿಯಲ್ಲಿ 5.33 ಕೋಟಿ ಮತದಾರರಿದ್ದರು. ಈಗಾಗಲೇ ಭಾರತ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7 ಹಂತಗಳಲ್ಲಿ ದೇಶದಾದ್ಯಂತ ಚುನಾವಣೆ ನಡೆಯಲಿದ್ದು,
ಜೂನ್ 4 ರಂದು ವೋಟಿಂಗ್ ಕೌಂಟಿಂಗ್ ನಡೆಯಲಿದೆ. ಈ ಚುನಾವಣೆಗೆ ಮತಚಲಾಯಿಸಲು ಈಗ ನಿಮ್ಮ ವೋಟಿಂಗ್ ಪವರ್ ಇದೆಯೇ ಅಂದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಲೇ ಬೇಕಾದ ಸಮಯ. ಇಲ್ಲವಾದಲ್ಲಿ ಆನ್ಲೈನ್ ಮೂಲಕ ವೋಟರ್ ಐಡಿ’ಗೆ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ನಿಮ್ಮ ವೋಟಿಂಗ್ ಪವರ್ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಅಂದಹಾಗೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಮಾತ್ರವಲ್ಲದೇ ಎಲ್ಲರೂ ಸಹ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಚೆಕ್ ಮಾಡಿಕೊಳ್ಳುವುದು ಉತ್ತಮ. ಬದಲಾದ ಕಾಲಮಾನ ಇದು. ಮತದಾರರೇ ನೀವು ಈಗ ಸುಲಭವಾಗಿ ನೀವಿರುವ ಸ್ಥಳದಲ್ಲೇ ಆನ್ಲೈನ್ ಮೂಲಕ, ಎಸ್ಎಂಎಸ್ ಮೂಲಕ, ಸಹಾಯವಾಣಿ ಮೂಲಕ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಅಪ್ಡೇಟ್ ಪಡೆಯಬಹುದಾಗಿದೆ. ಆ ವಿಧಾನಗಳನ್ನು ಒಂದೊಂದಾಗಿ ಈ ಕೆಳಗಿನಂತೆ ತಿಳಿಸಲಾಗಿದೆ.
ಎಸ್ಎಂಎಸ್ ಮೂಲಕ ವೋಟರ್ ಲಿಸ್ಟ್ ಚೆಕ್ ಮಾಡುವುದು ಹೇಗೆ?
ಮೊದಲಿಗೆ ನೀವು ವೋಟರ್ ಐಡಿ’ಗಾಗಿ ಅಪ್ಲಿಕೇಶನ್ ಸಲ್ಲಿಸಿರಬೇಕು. ಅಪ್ಲಿಕೇಶನ್ ನಂಬರ್ ನಿಮ್ಮಲ್ಲಿ ಇರಬೇಕು. ಈ ಮಾಹಿತಿ ಇರುವವರು ಕೆಳಗಿನಂತೆ ಎಸ್ಎಂಎಸ್ ಬರೆದು ಕಳುಹಿಸುವ ಮೂಲಕ ವೋಟರ್ ಲಿಸ್ಟ್ ಪಡೆಯಬಹುದು.
“EPIC” ಎಂದು ಬರೆದು ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ಅಪ್ಲಿಕೇಶನ್ ನಂಬರ್ ಬರೆದು 1950 ನಂಬರ್ಗೆ ಸಂದೇಶ ಕಳುಹಿಸಬೇಕು.
ಉದಾಹರಣೆಗೆ – “EPIC” (Voter ID Application Number).
ನಂತರ ನಿಮ್ಮ ಮೊಬೈಲ್ಗೆ ಈ ಕುರಿತ ಮಾಹಿತಿಯ ಎಸ್ಎಂಎಸ್ ಬರುತ್ತದೆ.
ಆನ್ಲೈನ್ ಮೂಲಕ ವೋಟರ್ ಲಿಸ್ಟ್ ಚೆಕ್ ಮಾಡುವ ವಿಧಾನ
ಭಾರತೀಯ ಚುನಾವಣಾ ಆಯೋಗವು 2024 ನೇ ಸಾಲಿನ ವೋಟರ್ ಲಿಸ್ಟ್ ಅನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯಗೊಳಿಸಿದೆ. ಆನ್ಲೈನ್ ಮೂಲಕ ಸುಲಭವಾಗಿ ಇದನ್ನು ಚೆಕ್ ಮಾಡಬಹುದು. ನೀವು ಸಹ ನಿಮ್ಮ ಹೆಸರು ವೋಟರ್ ಲಿಸ್ಟ್ನಲ್ಲಿ ಇರುವುದನ್ನು ಚೆಕ್ ಮಾಡಿಕೊಳ್ಳಬೇಕು ಎಂದರೆ ಕೆಳಗಿನ ವಿಧಾನ ಅನುಸರಿಸಿ.
– ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ https://www.eci.gov.in/ ಗೆ ಭೇಟಿ ನೀಡಿ.
– ತೆರೆದ ವೆಬ್ಪೇಜ್ನಲ್ಲಿ ‘Election Management >> Electoral Roll ‘ ಆಯ್ಕೆ ಮಾಡಿ ಕ್ಲಿಕ್ ಮಾಡಿ.
– ಮತ್ತೊಂದು ವೆಬ್ಪೇಜ್ ತೆರೆಯುತ್ತದೆ. ಈ ವೆಬ್ಪುಟದಲ್ಲಿ ‘Voter Search’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
– ನಂತರ ತೆರೆಯುವ ವೆಬ್ಪೇಜ್ನಲ್ಲಿ 3 ಆಯ್ಕೆಗಳಿರುತ್ತವೆ.
– ‘ Seartch By EPIC, Search By Details, Search by Mobile’ ಎಂದು.
– ನಿಮ್ಮಲ್ಲಿ ಯಾವ ಮಾಹಿತಿಗಳು ಲಭ್ಯ ಇವೆಯೋ, ಅದಕ್ಕನುಗುಣವಾಗಿ ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ವೋಟರ್ ಐಡಿ/ ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಬಹುದು.
ಸಹಾಯವಾಣಿ ಬಳಸಿ ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ವಿಧಾನ