ತಮಿಳು ನಟಿ ಮಹಾಲಕ್ಷ್ಮೀ ಎರಡನೇ ಮದುವೆಯಾದ ಬಳಿಕ ಸಖತ್ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದ ನಟಿ ಪತಿಯ ಗಾತ್ರದಿಂದ ಸಖತ್ ಟ್ರೋಲ್ ಗೆ ಒಳಗಾಗಿದ್ದರು.
ಎಷ್ಟೋ ಟ್ರೋಲ್ ಆದ್ರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೋಡಿ ಜೀವನವನ್ನು ಎಂಜಾಯ್ ಮಾಡ್ತಿದ್ದರು. ಆದರೆ ಇತ್ತೀಚೆಗೆ ಮಹಾಲಕ್ಷ್ಮಿ ಹಾಗೂ ರವೀಂದ್ರ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಮೊದಲೇ ಮದುವೆ ಆಗಿದ್ದ ಮಹಾಲಕ್ಷ್ಮಿ ವಿಚ್ಛೇದನದ ನಂತರ ಮಹಾಲಕ್ಷ್ಮಿ ರವೀಂದ್ರ ಚಂದ್ರಶೇಖರನ್ ಅವರನ್ನು ವಿವಾಹವಾದ್ರು. ಮದುವೆಯ ನಂತರ ಮಹಾಲಕ್ಷ್ಮಿ ಅವರಿಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಆಗಾಗ ಹಂಚಿಕೊಳ್ತಿದ್ರು. ಆದ್ರೆ ಇತ್ತೀಚಿಗೆ ರವೀಂದ್ರ ಚಂದ್ರಶೇಖರ್ ಪತ್ನಿ ಜೊತೆಗಿನ ಯಾವುದೇ ಫೋಟೋಗಳನ್ನು ಕೂಡ ಹಂಚಿಕೊಂಡಿಲ್ಲ.
ಒಂಟಿಯಾಗಿರುವ ಫೋಟೋಗಳನ್ನೇ ರವೀಂದ್ರ ಚಂದ್ರಶೇಖರನ್ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಾನು ನನ್ನೊಳಗೆ ಏನನ್ನೋ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಜೊತೆ ರವೀಂದ್ರ ಮುನಿಸಿಕೊಂಡಂತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಈ ಜೋಡಿ ಎಲ್ಲೇ ಹೋದ್ರು ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ಶೇರ್ ಮಾಡುತ್ತಿದ್ರು. ಆದ್ರೆ ಇತ್ತೀಚಿಗೆ ರವೀಂದ್ರ ಚಂದ್ರಶೇಖರನ್ ಒಬ್ಬರೇ ಇರುವ ಫೋಟೋ ಶೇರ್ ಮಾಡ್ತಾರೆ ಜೊತೆಗೆ ಬೇಸರದ ಲೈನ್ ಬರೆದು ವಿಚ್ಛೇದನದ ಸೂಚನೆ ನೀಡಿದ್ದಾರೆ.
ಸಿಂಗಲ್ ಫೋಟೋ ಶೇರ್ ಮಾಡುವ ರವೀಂದ್ರ ಚಂದ್ರಶೇಖರನ್ಗೆ ಮಹಾಲಕ್ಷ್ಮಿ ವಾರ್ನಿಂಗ್ ಕೊಟ್ಟಿದ್ದಾರಂತೆ. ಈ ರೀತಿಯ ಫೋಟೋಗಳನ್ನು ಹಾಕ್ಬೇಡಿ ಇದ್ರಿಂದ ಬ್ರೇಕಪ್ ವದಂತಿ ಹಬ್ಬುತ್ತದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ ಎನ್ನಲಾಗ್ತಿದೆ.
ಮಹಾಲಕ್ಷ್ಮಿಗೆ ಓರ್ವ ಮಗನಿದ್ದಾಣನೆ. ಅವನಿಗೆ 9 ವರ್ಷ ವಯಸ್ಸು. ಈತ ಮಹಾಲಕ್ಷ್ಮಿಗೆ ಮೊದಲ ಪತಿಯ ಮಗ. ಹೆಚ್ಚಾಗಿ ಪತಿಯ ಜೊತೆಗೆ ಮಾತ್ರ ಫೋಟೋ ಹಂಚಿಕೊಳ್ಳುತ್ತಿದ್ದ ನಟಿ ಇತ್ತೀಚೆಗೆ ಮಗನೊಂದಿರುವ ಫೋಟೋವನ್ನು ಹಂಚಿಕೊಂಡಿದ್ದರೆ.