ಬೆಂಗಳೂರು: ಮಾರ್ಚ್ 8 ರಂದು ಮಹಿಳೆಯರ ದಿನಾಚರಣೆ ಪ್ರಯುಕ್ತ ಮಯೂರ ಹೊಟೇಲ್ಗಳಲ್ಲಿ ಮಹಿಳೆಯರಿಗೆ ಶೇ 50 ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 8 ರಂದು ಆಚರಿಸಲಾಗುತ್ತಿರುವ 48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್ಗಳಲ್ಲಿ ಈ ರಿಯಾಯಿತಿ ನೀಡಲಾಗಿದೆ.
ಕೊಠಡಿ ಬುಕ್ಕಿಂಗ್ ಮೇಲೆ 50 ಶೇ ಹಾಗೂ ಊಟೋಪಹಾರದ ಮೇಲೆ 20 ಶೇ ರಿಯಾಯಿತಿಯ ವಿಶೇಷ ಕೊಡುಗೆ ನೀಡಲಾಗಿದೆ. ಈ ವಿಶೇಷ ಕೊಡುಗೆ ಮಾ. 6 ರಿಂದ ಮಾ. 10 ರವರೆಗೆ ಅನ್ವಯಿಸಲಿದೆ. ನಿಗಮದ ಹೋಟೆಲ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಒಬ್ಬ ಮಹಿಳೆ ಅಥವಾ ಕುಟುಂಬ ಅಥವಾ ಮಹಿಳೆಯರ ಗುಂಪು, ಪ್ರವಾಸ ಕೈಗೊಳ್ಳುವ ಮಹಿಳಾ ಪ್ರವಾಸಿಗರಿಗೆ 50 ಶೇ ರಿಯಾಯಿತಿ ಘೋಷಿಸಿದೆ. ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಿಗಮದ ಎಂಡಿ ಮನವಿ ಮಾಡಿದ್ದಾರೆ.