ಸ್ಯಾಂಡಲ್ವುಡ್ ನ ಹಿರಿಯ ನಟ ದ್ವಾರಕೀಶ್ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಫೆ.15ರಂದು ದ್ವಾರಕೀಶ್ ಸ್ವಗ್ರಹದಲ್ಲಿ ನಿಧನರಾಗಿದ್ದು ದ್ವಾರಕೀಶ್ ಅಗಲಿಕೆಯಿಂದ ಶಾಕ್ ಆಗಿದೆ ಎಂದು ಪತ್ನಿ ಶೈಲಜಾ ಹೇಳಿದ್ದಾರೆ.
ದ್ವಾರಕೀಶ್ ಅವರನ್ನು ನಮ್ಮ ಕುಟುಂಬದವರು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ತಿದ್ದೆ, ಆದರೆ ಅವರಿಗೆ ಕಳುಹಿಸೋಕೆ ಮನಸ್ಸು ಇರಲಿಲ್ಲ. ಅಂದು ಸುಮಾರು ವರ್ಷಗಳಿಂದ ಅವರು ಮಾತಾಡದೇ ಇರುವ ಮಾತುಗಳನ್ನಾಡಿದ್ದರು. ಅದೇ ನನಗೆ ಇವತ್ತು ಶಾಕ್ ಆಗ್ತಿದೆ. ನನ್ನನ್ನು ಪ್ರೀತಿಯಿಂದ ಪುಟ್ಟ ಅಂತ ಕರೆಯುತ್ತಿದ್ದರು ಎಂದು ಶೈಲಜಾ ಭಾವುಕರಾಗಿ ನುಡಿದಿದ್ದಾರೆ.
ಅಂಬುಜಾ ಅಕ್ಕ ಮತ್ತು ಅವರ ಮಕ್ಕಳು ನನ್ನ ಯಾವತ್ತೂ ಬೇರೆಯವರ ಥರ ನೋಡ್ಲಿಲ್ಲ. ಅವರಿಗೆ ನಾನು ಚಿರಋಣಿ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಏಳ್ತಿದ್ದವ್ರು ನಿನ್ನೆ 7 ಗಂಟೆಗೆ ಎದ್ದಿದ್ದೇ ಸೋಜಿಗ. ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿನಿ ಎಂದು ಪತ್ನಿ ಶೈಲಜಾ ಭಾವುಕರಾಗಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಏಳು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.