IPL ಸೀಸನ್ 17 ರಲ್ಲಿ ಸತತ 6 ಪಂದ್ಯಗಳಲ್ಲಿ ಆರ್ಸಿಬಿ ಸೋಲಲು ಹರ್ಭಜನ್ ಸಿಂಗ್ ಕಾರಣ ಕೊಟ್ಟಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, “ಆರ್ಸಿಬಿ ತಂಡದ ಹಾದಿ ಕಠಿಣವಾಗುತ್ತಿದೆ. ಮಿನಿ ಹರಾಜಿನ ಬಳಿಕ ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿಲ್ಲ ಎಂಬ ಕಾಮೆಂಟ್ಗಳನ್ನು ಕೇಳಿದ್ದೇವೆ. ಇದೀಗ ಅವರು ಇದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನ ಪಿಚ್ ಬ್ಯಾಟ್ಸ್ಮನ್ಗಳ ಪಿಚ್ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಈ ಪಿಚ್ನಲ್ಲಿ ಬೌಲ್ ಮಾಡಿ 2 ಅಥವಾ 3 ವಿಕೆಟ್ ಪಡೆಯುತ್ತೇನೆಂದು ಯರಾದರೂ ಹೇಳಬೇಕಾದ ಅಗತ್ಯವಿದೆ,” ಎಂದು ಹೇಳಿದ್ದಾರೆ
288 ರನ್ಗಳ ಗುರಿಯನ್ನು ಹಿಂಬಾಲಿಸಿದ ಆರ್ಸಿಬಿಗೆ ಪವರ್ಪ್ಲೇನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ತಂದುಕೊಟ್ಟಿದ್ದರು. ಇದಾದ ಬಳಿಕ ಬ್ಯಾಕೆಂಡ್ನಲ್ಲಿ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್ಸಿಬಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು.
ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲರಾದರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ದಿನೇಶ್ ಕಾರ್ತಿಕ್, ಕೇವಲ 35 ಎಸೆತಗಳಲ್ಲಿ 83 ರನ್ಗಳನ್ನು ಸಿಡಿಸಿದ್ದರು. ಈ ಕಾರಣದಿಂದ ಆರ್ಸಿಬಿ 262 ರನ್ಗಳನ್ನು ಕಲೆ ಹಾಕಲು ಸಾಧ್ಯವಾಗಿತ್ತು