ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶೇಗುಣಶಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಬಡ ಹಾಗು ಮದ್ಯಮ ವರ್ಗದ ಕುಟುಂಬಗಳು ಬೀದಿಗೆ ಬೀಳುತ್ತಿರುವುದರಿಂದ ಗ್ರಾಮದ ಮಹಿಳೆಯರೆಲ್ಲರೂ ಪಂಚಾಯತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡುವುದರ ಜೊತೆಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮಂತ್ಲಿ ಮಾಮೂಲಿ ಪಡೆದು ಅಕ್ರಮ ಬೆಂಬಲಿಸುತ್ತಿರುವದಾಗಿ ಆರೋಪ ಮಾಡಿ ಬಾರಿ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಮಹಿಳೆಯರ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳಾದ ಹಣಮಂತ ವಜ್ರಮಟ್ಟಿ, ಸಿಪಿಐ ಸಂಜಯ ಅಸ್ಕಿ ಪಿಎಸ್ಐ ಕಿರಣ್ ಜೂಲ್ಪಿ, ಪಿಎಸ್ಐ ದತ್ತಗುರು ಅಥಣಿ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿದ್ದು ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕ್ಕೊಳ್ಳುವುದಾಗಿ ಭರವಸೆ ನೀಡಿದರು.