ಶೀತ, ಕೆಮ್ಮು ಬಂತು ಅಂದ್ರೆ ಸಾಕು ಜನ ಸಾಮಾನ್ಯವಾಗಿ ಮೆಡಿಕಲ್ ನಲ್ಲಿ ಔಷಧಿ ಪಡೆದುಕೊಳ್ಳುತ್ತಾರೆ.ಆದರೆ ವೈದ್ಯರ ಸಲಹೆ ಇಲ್ಲದೆ ಜ್ವರ ಎಂದು ಇಂಗ್ಲಿಷ್ ಮೆಡಿಸಿನ್ ತೆಗೆದುಕೊಂಡರೆ ಏನಾಗಬಹುದು ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ.
ಜ್ವರ, ಮೈಕೈ ನೋವು ಬಂದ ಹಿನ್ನೆಲೆಯಲ್ಲಿ ಮಹಿಳೆ ನೋವು ನಿವಾರಕ ಇಬುಪ್ರೊಫೇನ್ ಎನ್ನುವ ಮಾತ್ರೆಯನ್ನು ನುಂಗಿದ್ದಾರೆ. ಮಾತ್ರೆ ತಿಂದ ಸ್ವಲ್ಪ ಹೊತ್ತಿನ ಬಳಿಕ ಕಣ್ಣು ಕೆಂಪಾಗಿ, ಮುಖ ಸುಕ್ಕುಗಟ್ಟಿದಂತಾಗಿ ಹಾವಿನ ಚರ್ಮದಂತಾಗಿದೆ. ತುಟಿಗಳ ಮೇಲೆ ಹಳದಿ ಪದರವು ರೂಪುಗೊಂಡಿತ್ತು, ಹಾಗೆಯೇ ಕಣ್ಣಿನಿಂದ ರಕ್ತದ ಕೋಡಿಯೇ ಹರಿಯಲು ಪ್ರಾರಂಭವಾಗಿತ್ತು. ಪ್ರತಿ ಮಾತ್ರೆ, ಔಷಧಿಗಳ ಮೇಲೆ ವೈದ್ಯರ ಸಲಹೆ ಇಲ್ಲದೆ ನೀವು ಇದನ್ನು ತೆಗೆದುಕೊಳ್ಳಬೇಡಿ ಎಂದು ಬರೆದಿರುತ್ತದೆ.
ಇಬುಪ್ರೊಫೇನ್ ಸಾಮಾನ್ಯವಾಗಿ ಸುರಕ್ಷಿತವಾಗಿದೆ, ಆದರೆ ವೈದ್ಯರ ಸಲಹೆಯಿಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಇರಾಕ್ ಮಹಿಳೆ ಇದೇ ತಪ್ಪನ್ನು ಮಾಡಿದ್ದಳು. ಮೈ-ಕೈ ನೋವು ಶೀತವೆಂದು ಈ ಔಷಧಗಳನ್ನು ತೆಗೆದುಕೊಂಡ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.
ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಔಷಧವು ಆಕ್ರಮಣ ಮಾಡಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ. ಇದು ದೇಹದ ಆರೋಗ್ಯಕರ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ವ್ಯಕ್ತಿಗೆ ಹಾನಿ ಮಾಡಲು ಪ್ರಾರಂಭಿಸುತ್ತಾರೆ. ಇದರಿಂದ ದೇಹದಲ್ಲಿ ಗುಳ್ಳೆಗಳು ಏಳಬಹುದು ಮತ್ತು ಊತ ಉಂಟಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಅಪರೂಪದ ಸೋಂಕಾಗಿದೆ.
ಸದ್ಯ ಮಹಿಳೆಯು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಏನೂ ತಿನ್ನಲು, ಕುಡಿಯಲು ಸಾಧ್ಯವಾಗುತ್ತಿಲ್ಲ. ಗಂಟಲಿಗೆ ಟ್ಯೂಬ್ ಅಳವಡಿಸಲಾಗಿದೆ. ಮಹಿಳೆಗೆ ಈ ಮೊದಲು ಯಾವುದಾದರೂ ಕಾಯಿಲೆ ಇತ್ತೇ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಕೆಲವು ಅಪರೂಪದ ಸಂದರ್ಭಗಳಲ್ಲಿ ಅವು ಸಾವಿಗೆ ಕಾರಣವಾಗಬಹುದು. ಅನೇಕ ಬಾರಿ ಗಂಭೀರ ಚರ್ಮದ ಸೋಂಕುಗಳು ಸಂಭವಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ.