ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಗೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ.
ಪಾಕಿಸ್ತಾನದ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್ (X) ವಿಫಲವಾಗಿದೆ ಮತ್ತು ಮೈಕ್ರೋಬ್ಲಾಗಿಂಗ್ ಸೈಟ್ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ನಿಷೇಧ ಹೇರಿದೆ. ಪಾಕಿಸ್ತಾನದಲ್ಲಿ ಎಕ್ಸ್ ನೋಂದಣಿಯಾಗಿಲ್ಲ ಅಥವಾ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲು ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಲ್ಲ ಎಂದು ಸಿಂಧ್ ಹೈಕೋರ್ಟ್ಗೆ ತಿಳಿಸಿದೆ.
ದೇಶದ ಭದ್ರತೆಯ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಹಲವು ದೇಶಗಳು ಎಕ್ಸ್ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದವು ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಪಾಕ್ ಇಲ್ಲಿಯವರೆಗೆ ಅಧಿಕೃತವಾಗಿ ಎಕ್ಸ್ ಅನ್ನು ನಿಷೇಧ ಮಾಡಿರುವುದಾಗಿ ತಿಳಿಸಿಲ್ಲ. ಆದರೆ ಕಳೆದ ಫೆಬ್ರವರಿ 17 ರಿಂದ ಪಾಕ್ ಜನತೆ ಎಕ್ಸ್ ಅನ್ನು ಸರಿಯಾಗಿ ಬಳಕೆ ಮಾಡಲು ಅಸಮರ್ಥರಾಗಿದ್ದಾರೆ.