ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಮಾತಿದೆ.. ಆ ಮಾತನ್ನ ಅಕ್ಷರಶಃ ಸಾಬೀತುಪಡಿಸಿದವ್ರು ಕರ್ನಾಟಕದ ಪ್ರಚಂಡ ಕುಳ್ಳ ಅಂತಾನೇ ಖ್ಯಾತಿ ಪಡೆದ ನಟ ದ್ವಾರಕೀಶ್ ಅವರು.. ದ್ವಾರಕೀಶ್ ಈ ಹೆಸರು ಕೇಳಿದ ಕೂಡ್ಲೆ ಎಂತಹವರ ಮುಖದಲ್ಲೂ ನಗು ಮೂಡುತ್ತೆ.. ಈಗ ಅದೇ ಹೆಸ್ರು ಎಲ್ಲರ ಕನ್ಣಲ್ಲಿ ನೀರಡುವಂತೆ ಮಾಡಿದೆ.. ತುಂಬು ೮೧ ವರ್ಷಗಳ ಬದುಕಿಗೆ ಪೂರ್ಣವಿರಾಮ ಇಟ್ಟು, ಬಾರದ ಲೋಕಕ್ಕೆ ತೆರಳಿದ್ದಾರೆ ಕನ್ನಡ ಚಿತ್ರರಂಗದ ಅದರಷ್ಟವಂತ..
ಸಾವಿನಲ್ಲೂ ಶಾಂತತೆ ಪಡೆದವರು ದ್ವಾರಕೀಶ್,, ತಿಂಡಿ ತಿಂದು ಮಲಗಿದ್ದಾಗಲೇ ಚಿರ ನಿದ್ದೆಗೆ ಜಾರಿದ್ರು.. ಈ ಮಹಾನ್ ವ್ಯಕ್ತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಅವರ ಆತ್ಮೀಯರು ಕುಟುಂಬಸ್ಥರು, ನೆನ್ನೆಯಿಂದಲೂ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಅರ್ಪಿಸಿದ್ರು..
ದ್ವಾರಕೀಶ್ ನಿವಾಸದ ಬಳಿ ಅಂತಿಮ ವಿಧಿ ವಿಧಾನಗಳು ಮುಗಿದ ನಂತರ ಬೆಳಗ್ಗೆ ೮ ಗಂಟೆಗೆ ದ್ವಾರಕೀಶ್ ಪಾರ್ಥೀವ ಶರೀರವನ್ನ ಟೌನ್ಬಳಿ ಇರುವ ರವೀಂಧ್ರ ಕಲಾಕ್ಷೇತ್ರ ತರಲಾಯಿತು.. ಅಲ್ಲಿಯೂ ಸಹ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಈ ವೇಳೆ ಶಿವಣ್ಣ, ಸುದೀಪ್, ಮಾನ್ಯ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ, ಸೇರದಿಂತೆ ಸಾಕಷ್ಟು ಗಣ್ಯರು ಅಂತಿಮ ನಮನ ಸಲ್ಲಿಸಿದ್ರು..
ಇನ್ನು ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್ ಮಿಡಿಯಾದಲ್ಲಿ ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಚಿತ್ರೋದ್ಯಮಕ್ಕೆ ದ್ವಾರಕೀಶ್ ಅವರ ಕೊಡುಗೆ ಅಪಾರ. ದಶಕಗಳ ಕಾಲ ಸದಾ ನೆನಪಿನಲ್ಲಿ ಉಳಿಯುವ ನಟನೆ ಹಾಗೂ ಸಿನಿಮಾಗಳನ್ನು ನೀಡಿದ್ದಾರೆಅವರ ಅದ್ಭುತ ಜರ್ನಿಯನ್ನು ನಾವು ಸ್ಮರಿಸುತ್ತೇವೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ” ಎಂದು ನರೇಂದ್ರ ಮೋದಿ ತನ್ನ ಸೋಷಿಯಲ್ ಮಿಡಿಯಾದ ಖಾತೆಯಲ್ಲಿ ಬರೆದುಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾರೆ..
ಸುಮಾರು ೧೨ ವರೆ ವರೆಗೂ ರವೀಂಧ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಆ ನಂತರ ಚಾಮರಾಜ ಪೇಟೆಯಲ್ಲಿ ಇರುವ ಹಿಂದೂ ರುದ್ರಭೂಮಿ, ಟಿಆರ್ ಮಿಲ್ನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ, ದ್ವಾರಕೀಶ್ ಐವರು ಪುತ್ರರು ಅಂತಿಮ ವಿಧಿ ವಿಧಾನಗಳನ್ನ ನೆರವೇರಿದ್ರು.. ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿದ್ದ, ಪ್ರಚಂಡ ಕುಳ್ಳ, ಕರುನಾಡಿನ ಅದೃಷ್ಟವಂತ ಇನ್ನು ನೆನೆಪು ಮಾತ್ರ..