ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ಎಸ್.ಕೆ. ಕಾರ್ಸ್ ಮಾಲೀಕ ಮಹಮ್ಮದ್ ಸಲೀಂ ಅಹಮ್ಮದ್ ಹಾಗೂ ಸೋಮಶೇಖರ್ ನೇತೃತ್ವದಲ್ಲಿ ಅದ್ದೂರಿ ಶ್ರೀ ರಾಮನವಮಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮತ್ತು ಹ್ಯುಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಆಗಮಿಸಿ ಶ್ರೀ ರಾಮನವಮಿ ಆಚರಣೆಯಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪಾನಕ ಮಜ್ಜಿಗೆ ವಿತರಿಸಲಾಯಿತು.
ಬಳಿಕ ಮಾತನಾಡಿದ ನಾಗಲಕ್ಷ್ಮಿ ಚೌಧರಿ’ ಸೌಹಾರ್ದತೆಯ ಸಂಕೇತವಾಗಿ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಇಲ್ಲಿ ಶ್ರೀರಾಮನವಮಿ ಆಚರಿಸಲಾಗುತ್ತದೆ. ಇದು ನಿಜಕ್ಕೂ ಸಮಾನತೆಯ ಸಂಕೇತವಾಗಿದೆ’ ಎಂದರು.
ಬಿ.ಎಂ. ಚಿಕ್ಕಣ್ಣ ಮಾತನಾಡಿ’ ಅಲ್ಪಸಂಖ್ಯಾತ ಸಮುದಾಯದವರು ಒಟ್ಟಿಗೆ ಸೇರಿ ಶ್ರೀ ರಾಮನವಮಿ ಆಚರಿಸುತ್ತಿರುವುದು ಇದು ದೇಶಕ್ಕೆ ಮಾದರಿಯಾಗಿದೆ. ನಾವೆಲ್ಲ ಒಂದೇ ಎಂಬ ಸಮಾನತೆ ಮತ್ತು ಭಾತೃತ್ವದ ಸಂದೇಶವಾಗಿ ಇದು ದೇಶಕ್ಕೆ ತಿಳಿಯಲಿ’ಎಂದರು.
ಈ ಸಂದರ್ಭದಲ್ಲಿ ಗ್ಲೋರಿಯಾ ಎಲಿಜಬೆತ್, ಹರೀಶ್ ಪಾರ್ಥ, ಬಿ.ಎಂ. ಜಗದೀಶ್, ಸೋಮಶೇಖರ್, ಅಮ್ಜದ್ ಖಾನ್, ನಯಾಜ್ ಪಾಷಾ, ಮೊಹಮ್ಮದ್ ಸಿದ್ದಿಕ್, ಪುಷ್ಪಲತಾ, ಅಶ್ವತ್ಥಮ್ಮ, ಜಯಶ್ರೀ, ಲಲಿತಮ್ಮ ಮುಂತಾದವರಿದ್ದರು