ಹಿಂದಿ ಕಿರುತೆರೆ ಸಾಕಷ್ಟು ಖ್ಯಾತಿ ಘಳಿಸಿರುವ ಹಾಗೂ ಬಾಲಿವುಡ್ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದಿವ್ಯಾಂಕಾ ತ್ರಿಪಾಠಿ ತನಿಗೆ ಎದುರಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ.
‘ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಟೂತ್ ಪೇಸ್ಟ್ ಬಾಕ್ಸ್ಗಳನ್ನು ಮಾರಾಟ ಮಾಡುತ್ತಿದ್ದೆ. ಒಂದು ಪೇಸ್ಟ್ ಬಾಕ್ಸ್ಗೆ ಒಂದು ರೂಪಾಯಿ ಕೊಡುತ್ತಿದ್ದರು. ಆ ಹಣ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಎಂದಿದ್ದಾಳೆ.
ದಿವ್ಯಾಂಕಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಮುಖ ಕಾಮೆಂಟ್ಗಳನ್ನು ಮಾಡಿದ್ದಾರೆ. ‘ಧಾರಾವಾಹಿ ಅಥವಾ ಕಾರ್ಯಕ್ರಮ ಮುಗಿದ ನಂತರ ಕಲಾವಿದರಿಗೆ ನಿಜವಾದ ಕಷ್ಟ ಪ್ರಾರಂಭವಾಗುತ್ತವೆ. ಸರಿಯಾದ ಅವಕಾಶ, ಹಣ ಸಿಗಬೇಕಾದರೆ ತೊಂದರೆ ಎದುರಿಸಬೇಕಾಗುತ್ತದೆ. ನನಗೂ ಅಂತಹ ಕಷ್ಟದ ಅನುಭವವಾಗಿತ್ತು. ಪಾವತಿಸಬೇಕಾದ ಬಿಲ್ಗಳು ಮತ್ತು ಇಎಂಐಗಳನ್ನು ಮ್ಯಾನೇಜ್ ಮಾಡುವುದು ನನಗೂ ಕಷ್ಟವಿತ್ತು. ಆಗ ನನಗೊಂದು ಸೀರಿಯಲ್ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆಯ ಅವಕಾಶ ಬಂದಿದೆ ಎಂದುಕೊಂಡು ಹೋಗಿದ್ದೆ. ಅಲ್ಲಿ ಡೈರೆಕ್ಟರ್ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದು ಹೇಳಿದ್ದ. ಸ್ವಲ್ಪ ಹೊತ್ತು ನನಗೇನೂ ಅರ್ಥವಾಗಲಿಲ್ಲ. ನಾನು ಅಲ್ಲಿಂದ ಹೊರಟೆ.
ಇಂತಹ ವಿಷಯಗಳು ತುಂಬಾ ಸಾಮಾನ್ಯವೆಂದು ಉದ್ಯಮವು ನಿಮ್ಮನ್ನು ನಂಬುವಂತೆ ಮಾಡುತ್ತದೆ. ಅವರು ಹೇಳಿದಂತೆ ಮಾಡದಿದ್ದರೆ ನಿಮ್ಮ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಭಯಪಡಬೇಡಿ. ಅಂತಹ ಜನರು ನಿಮ್ಮನ್ನು ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪ್ರತಿಭೆಯನ್ನು ನಂಬಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಈ ರೀತಿ ಕಾಸ್ಟಿಂಗ್ ಕೌಚ್ ಮತ್ತು ಮೀಟೂ ಬಗ್ಗೆ ಯೋಚಿಸುವ ಬದಲು ಇಂತಹ ಘಟನೆಗಳು ನಡೆಯಲಿಲ್ಲ ಎಂದು ನಿರ್ಲಕ್ಷಿಸುವುದು ಒಳಿತು ಎಂದು ದಿವ್ಯಾಂಕಾ ಹೇಳಿದ್ದಾರೆ.