ಚಂಡೀಗಢ:- ಕೆಲವೊಬ್ಬ ಮಹಿಳೆಯರಿಗೆ ಗಂಡ ಇದ್ದರೂ ಮತ್ತೊಬ್ಬನ ಜೊತೆ ಸುತ್ತುವ ಛಾಳಿ ಇರುತ್ತದೆ. ಅಲ್ಲದೇ ಅವರೊಟ್ಟಿಗೆ ಅತಿಯಾದ ಸಲಿಗೆ ಕೂಡ ಬೆಳೆಸಿ ಗಂಡನ ತಗ್ಲಾಕ್ಕೊಂಡಿದ್ದ ಅದೆಷ್ಟೋ ಉದಾಹರಣೆ ಇದೆ. ಅದೇ ರೀತಿ ಇಲ್ಲೊಬ್ಬ ಪತ್ನಿ ಸಿಕ್ಕಿ ಬಿದ್ದಿದ್ದಾಳೆ.
ಹರಿಯಾಣದ ಪಂಚುಕಾದ ಪಾರ್ಕ್ ಬಳಿ ಮಹಿಳೆ ಕಾರಿನಲ್ಲಿ ಬೇರೆ ವ್ಯಕ್ತಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿಕೊಂಡಾಗ ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ನೋಡಿದ ಪತಿ, ಕಾರಿನ ಗ್ಲಾಸ್ ಒಡೆದು ಆಕೆಯನ್ನು ಕಾರಿನಿಂದ ಎಳೆದು ಸಾರ್ವಜನಿಕವಾಗಿಯೇ ಬ್ಯಾಟಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಸೆಕ್ಟರ್ 25 ರ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಸಾರ್ವಜನಿಕವಾಗಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪರಪುರುಷನ ಜೊತೆ ಕುಳಿತುಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ವ್ಯಕ್ತಿ ಕಾರಿನ ಬಳಿ ತೆರಳಿ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ನಂತರ ಪತ್ನಿಯನ್ನು ಕಾರಿನಿಂದ ಎಳೆದು ಬ್ಯಾಟ್ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಹಿಳೆ ಜೋರಾಗಿ ಕೂಗಾಡಿದ್ದಾಳೆ. ಹೀಗಾಗಿ ಪಾರ್ಕ್ ನಲ್ಲಿದ್ದ ಜನರು ಓಡಿಬಂದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಾರಿನೊಳಗೆ ಕುಳಿತ್ತಿದ್ದ ವ್ಯಕ್ತಿ ಮಾತ್ರ ಮಹಿಳೆಯ ರಕ್ಷಣೆಗೆ ಬರಲಿಲ್ಲ. ಬದಲಾಗಿ ಗಲಾಟೆ ನೋಡಿಕೊಂಡೇ ಕಾರಿನಲ್ಲಿ ಕುಳಿತಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಪಾರ್ಕ್ ನಲ್ಲಿದ್ದ ಇತರ ಕೆಲ ವ್ಯಕ್ತಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ