ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ…ರಾಜ್ಯದಲ್ಲೂ ಸಹ ಎರಡು ಹಂತದಲ್ಲಿ ಮತದಾನದ ಹಬ್ಬ ನಡೆಯುತ್ತಿದ್ದು ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ರೀತಿಯ ಪ್ರಚಾರದಲ್ಲಿ ತೊಡಗಿದ್ದಾರೆ.. ಬಿರು ಬೇಸಿಗೆಯಲ್ಲೂ ಮತಭೇಟೆ ಜೋರಾಗಿಯೇ ನಡೆಯುತ್ತಿದೆ. ಸಿಲಿಕಾನ್ ಸಿಟಿಯ ಈ ಭಾಗದ ಜನ ಮಾತ್ರ ನಮ್ಮ ಏರಿಯಾಗೆ ಔಟ್ ಕೇಳಲು ಬರ್ಲಿ ಅಂತಾ ಕಾಯ್ತ ಇದ್ದಾರೆ. ಯಾಕೇ ಅಂತೀರಾ ಈ ಸ್ಟೋರಿ ನೋಡಿ..
ಯೆಸ್, ಹಗಲು ರಾತ್ರಿ ಎನ್ನೇದೆ ನೀರಿಗಾಗಿ ಇಲ್ಲಿನ ಜನ ಪಡ್ತಿರೋ ಪಾಡು ಅಷ್ಟಿಷ್ಟಲ್ಲ.. ಕಳೆದ ಒಂದುವರೆ ಎರಡು ವರ್ಷಗಳಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಳ್ಳಿ ಗ್ರಾಮದ ಬಸವೇಶ್ವರ ಬಡಾವಣೆ ಜನರಿಗೆ ಕುಡಿಯುವ ನೀರಿಲ್ಲ, ಕಾವೇರಿ ನೀರು ಅಂತೂ ಇನ್ನೂ ಬಂದಿಲ್ಲ, ಬೋರ್ ವೇಲ್ ನೀರು ಸಹ ನಿಂತು ಹೋಗಿದ್ದು ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ.. ಅದ್ರೇ ಒಂದು ಟ್ಯಾಂಕರ್ ಗೆ ೧೨೦೦ ರಿಂದ ,೨೦೦೦ ರೂಪಾಯಿ ಕೊಡಬೇಕಾಗಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಅವ್ರಿಗೆ ಹೇಳಿ ಹೇಳಿ ಸಾಕಾಗಿ ಹೋಗಿದ್ದಾರೆ..
ಹೌದು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮನೆಗಳಗೆ ನೀರು ಬಂದಿದ್ದು, ಅಮೇಲೆ ನೀರೇ ಬಂದಿಲ್ಲ.. ಈಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ.. ನಮ್ಮ ಬಡಾವಣೆಯಲ್ಲಿ ,೨೦೦ ಕ್ಕೂ ಹೆಚ್ಚು ಮನೆಗಳಿದ್ದು ೧೦೦೦ ಕ್ಕೂ ಹೆಚ್ಚು ಮತಗಳಿವೆ… ನಾವೂ ಯಾರು ಸಹ ನೀರಿಲ್ಲದೇ ಈ ಭಾರೀ ಔಟ್ ಮಾಡೋಲ್ಲ ಅಂತಿದ್ದಾರೆ.. ನಮ್ಮ ಏರಿಯಾಗೆ ಮತ ಕೇಳೋದಕ್ಕೆ ಬರುವವರು ನೀರು ತರಿಸಕೊಡಬೇಕು… ನಾವು ಯಾವುದೇ ರಾಜಕೀಯ ಪಕ್ಷ ನೋಡ್ತಿಲ್ಲ, ನಮಗೆ ನೀರಿನ ವ್ಯವಸ್ಥೆ ಯಾರು ಮಾಡ್ತರೋ ಅವ್ರಿಗೆ ಮತ ಹಾಕ್ತೇವೆ.. ಮತದಾನಕ್ಕೂ ಮೊದಲು ನಮ್ಮ ಸಮಸ್ಯೆ ಬಗೆಹರಿಯಬೇಕು, ಇಲ್ಲ ಅಂದ್ರೇ ನಾವ್ಯಾರು ಮತದಾನ ಮಾಡೋದಿಲ್ಲ, ಮತದಾನವನ್ನ ಬಹಿಷ್ಕಾರ ಮಾಡಿ ಹೋರಾಟ ಮಾಡ್ತವೆ ಅಂತಿದ್ದಾರೆ..
ಇನ್ನು ತಮ್ಮ ಸಮಸ್ಯೆ ಮುಂದಿಟ್ಟುಕೊಂಡು ವೋಟ್ ಹಾಗಲ್ಲ ಎಂದು ಹೇಳುವುದು ತಪ್ಪು. ಹಲವಾರು ತಿಂಗಳ ಅಥವ ವರ್ಷದ ಸಮಸ್ಯೆ ಎಲೆಕ್ಷನ್ ಬಂದಾಗ ಸರಿ ಹೋಗುತ್ತೆ ಅಂತ ಅಂದುಕೊಳ್ಳೋದು ಸರಿ ಅಲ್ಲ. ನಾವು ಭಾರತದ ಪ್ರಜೆಗಳಾಗಿ ನಮ್ಮ ಮತದಾನ ಬಹಳ ಶ್ರೇಷ್ಠ ಎಂದು ವಿಕ್ರಮ್ ರಾಯ್ ಅಪಾರ್ಟ್ಮೆಂಟ್ ಅಧ್ಯಕ್ಷ ತಿಳಿಸಿದ್ದಾರೆ. ಒಟ್ನಲ್ಲಿ ಇಲ್ಲಿನ ಜನ ನೀರಿಗಾಗಿ ಅಲೆದು ಅಲೆದಯ ಸಾಗಾಗಿದ್ದಾರೆ. ಈಗ ಎಲೆಕ್ಷನ್ ಟೈಮ್, ನಮ್ಮ ಡಿಮ್ಯಾಂಡ್ ನ ಮುಂದೆ ಹಿಟ್ಟು ಔಟ್ ಹಾಕೋದಾಗಿ ಹೇಳ್ತಿದ್ದಾರೆ. ಇನ್ನೂ ಇಲ್ಲಿಗೆ ಯಾವ ಪಾರ್ಟಿ ಅವ್ರು ನೀರಿನ ವ್ಯವಸ್ಥೆ ಮಾಡಿಸಿ ಔಟ್ ಪಡೆಯಲು ಮುಂದಾಗ್ತಾರೆ ಕಾದುನೋಡಬೇಕಿದೆ..