ಬೆಂಗಳೂರು: ಎಂಬಿಬಿಎಸ್ ಪದವೀಧರರನ್ನು ಮಾತ್ರ ತಾಲೂಕು ಆರೋಗ್ಯಾಕಾರಿಯನ್ನಾಗಿ ನೇಮಕ ಎಂದು ಹೈಕೋರ್ಟ್ ಆದೇಶಿಸಿದೆ. ಹೌದು ದಂತವೈದ್ಯ (ಬಿಡಿಎಸ್) ಪದವೀಧರರನ್ನು ತಾಲೂಕು ಆರೋಗ್ಯಾಕಾರಿಯನ್ನಾಗಿ ನೇಮಕ ಮಾಡುವಂತಿಲ್ಲ. ಆ ಹುದ್ದೆಗೆ ಎಂಬಿಬಿಎಸ್ ಪದವೀಧರರನ್ನು ನೇಮಕ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ತಾಲೂಕು ಆರೋಗ್ಯಾಕಾರಿಯಾಗಿ ತನ್ನ ವರ್ಗಾವಣೆ ಆದೇಶವನ್ನು ಕೆಇಟಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಡಾ.ವಿದ್ಯಾವತಿ ಯು. ಪಾಟೀಲ್ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
‘‘ಅರ್ಜಿದಾರರು ಎಂಬಿಬಿಎಸ್ ಪದವೀಧರರಲ್ಲ. ಹೀಗಾಗಿ, ಅವರನ್ನು ಸಾಮಾನ್ಯ ಕರ್ತವ್ಯ ವೈದ್ಯಾಕಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅವರು ಕರ್ನಾಟಕ ನಾಗರಿಕ ಸೇವಾ ಕಾಯಿದೆ- 2011ರ ಅನುಸಾರ ತಾಲೂಕು ಆರೋಗ್ಯಾಕಾರಿಯಾಗಿ ಕಾರ್ಯನಿರ್ವಹಿಸಲು ಅರ್ಹತೆ ಹೊಂದಿಲ್ಲ,’’ ಎಂದು ಹೇಳಿದೆ. ‘‘ಅರ್ಜಿದಾರರನ್ನು ಕುಂದಗೋಳ ತಾಲೂಕು ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ನಂತರ ಅದು ತಪ್ಪಾಗಿದೆ ಎಂದು ಮನಗಂಡ ರಾಜ್ಯ ಸರಕಾರ ಆ ಆದೇಶ ಹಿಂಪಡೆದಿದೆ.
ಈ ಕಾರಣಕ್ಕಾಗಿ, ಕೆಎಟಿ ಜಾರಿಗೊಳಿಸಿದ ಆದೇಶದಲ್ಲಿ ಯಾವುದೇ ರೀತಿಯ ದೋಷ ಕಂಡು ಬರುವುದಿಲ್ಲ,’’ ಎಂದು ನ್ಯಾಯಪೀಠ ಹೇಳಿದೆ. ‘‘ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಎಂಬಿಬಿಎಸ್ ಪದವೀಧರರಾಗಿರಬೇಕು. ಆ ಹುದ್ದೆ ಹೊರತಾಗಿ, ಕಾಯಿದೆಯ ಶೆಡ್ಯೂಲ್ (1)ನಲ್ಲಿಉಲ್ಲೇಖಿಸಿರುವಂತೆ ಹಲವು ಹುದ್ದೆಗಳಿವೆ. ಕಾಯಿದೆಯ ಉದ್ದೇಶಗಳಿಗಾಗಿ ಎಲ್ಲರನ್ನೂ ವೈದ್ಯಕೀಯ ಅಧಿಕಾರಿಗಳೆಂದು ಪರಿಗಣಿಸಲಾಗುತ್ತದೆ. ಆದರೆ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ ಪ್ರತ್ಯೇಕ ವರ್ಗವಾಗಿದ್ದು, ಅವರನ್ನು ವೈದ್ಯಕೀಯ ಅಧಿಕಾರಿ ಎಂದು ಪರಿಗಣಿಸಲಾಗುತ್ತದೆ,’’ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರು, ‘‘ಹಿರಿಯ ದಂತ ವೈದ್ಯಾಧಿಕಾರಿಯಾಗಿರುವ ಅರ್ಜಿದಾರರು ಕರ್ನಾಟಕ ನಾಗರಿಕ ಸೇವಾ (ವೈದ್ಯಕೀಯ ಅಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯಿದೆಯ- 2011ರ ಸೆಕ್ಷನ್ 2(ಜಿ)ಗೆ ಒಳಪಡುತ್ತಾರೆ. ಹಾಗಾಗಿ, ಅವರನ್ನು ತಾಲೂಕು ಆರೋಗ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿದ್ದ ಆದೇಶ ರದ್ದುಗೊಳಿಸುವುದನ್ನು ಹಿಂಪಡೆಯಬೇಕು,’’ ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿದರು.