ಬೆಂಗಳೂರು: ಹಲವು ನಗರಗಳಲ್ಲಿ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್–ಡೀಸೆಲ್ ದರಗಳು ದೆಹಲಿ: ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ 87.62 ರೂ. ಮುಂಬೈ: ಪೆಟ್ರೋಲ್ 104.21 ರೂ. ಮತ್ತು ಡೀಸೆಲ್ 92.15 ರೂ. ಕೋಲ್ಕತ್ತಾ: ಪೆಟ್ರೋಲ್ 103.94 ರೂ. ಮತ್ತು ಡೀಸೆಲ್ ಲೀಟರ್ ಗೆ 92.32 ರೂ. ಬೆಂಗಳೂರು: ಪೆಟ್ರೋಲ್ ಲೀಟರ್ ಗೆ 99.84 ರೂ .ಮತ್ತು ಡೀಸೆಲ್ ಲೀಟರ್ ಗೆ 85.93 ರೂ ಲಕ್ನೋ: ಪೆಟ್ರೋಲ್ 94.65 ರೂ. ಮತ್ತು ಡೀಸೆಲ್ 87.76 ರೂ. ನೋಯ್ಡಾ: ಪೆಟ್ರೋಲ್ 94.83 ರೂ. ಮತ್ತು ಡೀಸೆಲ್ 87.96 ರೂ. ಪಾಟ್ನಾ: ಪೆಟ್ರೋಲ್ 105.18 ರೂ. ಮತ್ತು ಡೀಸೆಲ್ 92.04 ರೂ.
ಪೆಟ್ರೋಲ್ ಬೆಲೆಯಲ್ಲಿನ ಭಾಗಶಃ ಇಳಿಕೆಯಿಂದಾಗಿ ಖಾಸಗಿ ವಾಹನಗಳ ಬಳಕೆ ಹೆಚ್ಚಾದ ಕಾರಣ ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದೆ. ಆದರೆ ಬೇಸಿಗೆಯಿಂದಾಗಿ ಶಾಖವು ಹೆಚ್ಚಾಗುತ್ತದೆ. ಜನರು ಹೆಚ್ಚೆಚ್ಚು ಕಾರುಗಳಲ್ಲಿ ಹೋಗಲು ಇಷ್ಟಪಡುತ್ತಿದ್ದಾರೆ. ಭವಿಷ್ಯದಲ್ಲಿ ಡೀಸೆಲ್ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ.