ತಮಿಳು ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರು ಕಿರುತೆರೆ ನಟಿ ಮಹಾಲಕ್ಷ್ಮಿಯನ್ನು ಮದುವೆಯಾದಾಗಿನಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಮಹಾಲಕ್ಷ್ಮೀ ಹಾಗೂ ರವೀಂದರ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದ್ದರು. ಆದರೆ ಇಬ್ಬರೂ ಜೊತೆಯಾಗಿ ಸಂಸಾರ ಮಾಡುತ್ತಿದ್ದು ನಾವು ಸೂಪರ್ ಜೋಡಿ ಎನ್ನುವುದನ್ನು ಪ್ರೂವ್ ಮಾಡುತ್ತಿದ್ದಾರೆ. ಆದರೆ ಈಗ ರವೀಂದ್ರ ಅವರ ಪೋಸ್ಟ್ ಪ್ರತಿಯೊಬ್ಬರಲ್ಲೂ ಕಳವಳ ಮೂಡಿಸಿದೆ.
ವಂಚನೆ ಪ್ರಕರಣದಲ್ಲಿ ಒಮ್ಮೆ ಜೈಲಿಗೂ ಹೋಗಿ ಬಂದ ರವೀಂದ್ರ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಇದರ ಮಧ್ಯೆ ಅವರಿಗೆ ಆರೋಗ್ಯ ಸಮಸ್ಯೆಯೂ ಇದೆ ಎನ್ನಲಾಗಿತ್ತು. ಈ ಎಲ್ಲ ಬೆಳವಣಿಗೆಗೆಳ ಮಧ್ಯೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.
ಕೆಟ್ಟ ಭಾವನೆ ಎನ್ನುವುದು ಒಂದು ಸಂದರ್ಭ. ಕೆಟ್ಟ ವಾತಾವರಣ ಎನ್ನುವುದು ಋಣಾತ್ಮಕ ಶಕ್ತಿ. ಕೆಟ್ಟ ದಿನ ಎನ್ನುವುದು ಪ್ರತಿ ದಿನವಲ್ಲ. ನನ್ನ ದಿನಗಳು ಹತ್ತಿರವಾಗುತ್ತಿವೆ. ಆದರೆ ನಾನು ಮಿಲಿಯನ್ ಸಲ ಒಳ್ಳೆತನ, ಕೆಟ್ಟದರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ ಎಂದು ರವೀಂದ್ರ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಕಮೆಂಟ್ ಬಾಕ್ಸ್ ಆಫ್ ಮಾಡಿಟ್ಟಿದ್ದಾರೆ.
ಈ ಒಂದು ಪೋಸ್ಟ್ನ್ನು ಅವರ ಪತ್ನಿ ಮಹಾಲಕ್ಷ್ಮಿಯೂ ಲೈಕ್ ಮಾಡಿದ್ದಾರೆ. ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರ್ ಕಾಲಿವುಡ್ ಕಿರುತೆರೆ ಜೋಡಿ. ಧಾರಾವಾಹಿ ನಟಿ ನಿರ್ಮಾಪಕ ರವೀಂದರ್ ಅವರು ಮದುವೆಯಾದಾಗ ಅವರ ಜೋಡಿ ವಿಚಾರವೇ ಚರ್ಚೆಯಾಗಿತ್ತು. ದಢೂತಿ ದೇಹದ ರವೀಂದರ್ ಅವರಿಗೆ ಸಣ್ಣಗೆ ಇದ್ದ ಮಹಾಲಕ್ಷ್ಮಿ ಹೇಗೆ ಜೊಡಿಯಾಗ್ತಾರೆ ಅಂತ ಟೀಕಿಸಿದ್ದರು ಜನ. ಇನ್ನೂ ಕೆಲವರು ದುಡ್ಡಿಗಾಗಿ ಮಹಾಲಕ್ಷ್ಮೀ ಮದುವೆಯಾಗಿದ್ದಾರೆ ಎಂದಿದ್ದಾರೆ. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಜೋಡಿ ಹಕ್ಕಿಗಳ ಬಾಳಲ್ಲಿ ರವೀಂದರ್ ಹಾಕಿರುವ ಪೋಸ್ಟ್ ಪ್ರಶ್ನೆ ಹುಟ್ಟುವಂತೆ ಮಾಡಿದೆ.