ಕಚೇರಿಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ ಕಾರಣಕ್ಕೆ ಪ್ರತಿಭಟನಾನಿರತರನ್ನು ಸೇವೆಯಿಂದ ವಜಾಗೊಳಿಸಿದ ಘಟನೆ ಗೂಗಲ್ ಕಚೇರಿಯಲ್ಲಿ ನಡೆದಿದೆ.
ಸಮಸ್ಯೆಗಳು ಹಾಗೂ ರಾಜಕೀಯ ವಾಗ್ವಾದಗಳಿಗೆ ಕಚೇರಿಯಲ್ಲಿ ಸ್ಥಳವಿಲ್ಲ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ಹೇಳಿದ್ದಾರೆ.
ಇಸ್ರೇಲ್ ನೊಂದಿಗೆ ಗೂಗಲ್ 1.2 ಶತಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ ಮಾಡಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಮಂದಿಯನ್ನು ಕೆಲಸದಿಂದ ಕಿತ್ತೊಗೆಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಂದರ್ ಪಿಚ್ಚೈ, ಇದು ಕೇವಲ ವ್ಯವಹಾರ. ಈ ವಿಷಯದಲ್ಲಿ ಸಹೋದ್ಯೋಗಿಗಳಿಗೆ ತೊಂದರೆ ನೀಡಲು ಹಾಗೂ ಅಸುರಕ್ಷಿತ ವಾತಾವರಣ ಮೂಡಿಲು ಯಾರಿಗೂ ಅವಕಾಶವಿಲ್ಲ ಎಂದರು.