‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’ ಎಂದು ಧ್ರುವ ಸರ್ಜಾ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಕರಣವನ್ನು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ನಟ ಧ್ರುವ ಸರ್ಜಾ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಅವರು ನೇಹಾ ಹಿರೇಮಠ್ ಸಾವಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ.
ಘಟನೆಯ ಕುರಿತಂತೆ ಧ್ರುವ ಸರ್ಜಾ ಪೋಸ್ಟ್ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ಸೂಚಿಸಿದ್ದಾರೆ. ‘ತಮ್ಮ ಸಾಮಾಜಿಕ ಕಾಳಜಿಗೆ ಧನ್ಯವಾದಗಳು. ಅಪರಾಧಿಗೆ ಇನ್ನೂ ಜೀವಂತವಾಗಿ ಇಟ್ಟಿರುವುದೇ ಒಂದು ವಿಪರ್ಯಾಸ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಕೊಲೆ ಮಾಡಿದ್ದಕ್ಕೆ ವಿಡಿಯೋ ಇದೆ. ಸಾಕ್ಷಿ ಇನ್ನೇನು ಬೇಕು’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಘಟನೆಗಳು ನಡೆದಾಗ ಕನ್ನಡ ಚಿತ್ರರಂಗದ ಯಾರೊಬ್ಬರೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ. ಆದರೆ ಧ್ರುವ ಸರ್ಜಾ ಹಾಗಲ್ಲ. ಅವರು ಯಾವಾಗಲೂ ಸೂಕ್ಷ್ಮ ಸಂವೇದಿ ಸಮಾಜಮುಖಿ. ಹಿಂದೆ ತಮ್ಮದೊಂದು ಚಲನಚಿತ್ರದಲ್ಲಿ ನಿರ್ದೇಶಕನ ತರಲೆಯಿಂದ ಒಂದು ಸಮಾಜಕ್ಕೆ ಅವಮಾನಕರವಾದ ರೀತಿಯಲ್ಲಿ ದೃಶ್ಯಗಳು ಮೂಡಿಬಂದಾಗ ತಾವೇ ಕ್ಷಮೆ ಕೇಳಿ ದೊಡ್ಡತನ ಮೆರೆದಿದ್ದರು’ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.