ಬೆಂಗಳೂರು:- ನಮಗೆ ರಸ್ತೆ ಮಾಡಿಕೊಡಲ್ಲ ಅಂದ್ರೆ ನಿಮಗೆ ನಾವು ವೋಟು ಹಾಕಲ್ಲ ಹೀಗಾಗಿ ಎಲೆಕ್ಷನ್ ಬಾಯ್ ಕಟ್ ಮಾಡೋದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ 5 ಸಾವಿರ ನಿವಾಸಿಗಳು ವಾರ್ನಿಂಗ್ ಕೊಟ್ಟಿದ್ದಾರೆ.
ಪ್ರಾಣ ಕೈಯಲ್ಲಿ ಹಿಡಿದು ಮಕ್ಕಳು ರಸ್ತೆ ದಾಟುವ ಪರಿಸ್ಥಿತಿ ಉಂಟಾಗಿದ್ದು, ಆಸ್ಪತ್ರೆಗೆ ಹೋಗಲು ಸುತ್ತಿ ಸುತ್ತಿ ಹೋಗುವ ಪರಿಸ್ಥಿತಿ ಉಂಟಾಗಿತ್ತು. ಈಗಾಗಲೇ ಆಂಬ್ಯುಲೆನ್ಸ್ ಅಲ್ಲಿಯೇ ಹಲವಾರು ಸಾವನ್ನಪ್ಪಿದ ಸಾಕಷ್ಟು ಉದಾಹರಣೆಗಳಿವೆ. ಮೈಸೂರು ಹೋಗಬೇಕು ಅಂದ್ರು ಸುತ್ತಿಕೊಂಡು ಹೋಗಬೇಕು. ಬೆಂಗಳೂರು ಹೋಗಬೇಕು ಅಂದ್ರೆ ಕೂಡ ಸುತ್ತಿ ಸುತ್ತಿ ಹೋಗುವ ದುಸ್ಥಿತಿ ಇದೆ.
ಈ ಪರಿಸ್ಥಿತಿ ಬದಲಾಗುವವರೆಗೂ ರಸ್ತೆ ಸರಿ ಮಾಡುವವರೆಗೂ ಮತ ಹಾಕಲ್ಲ ಅಂತ ಜನರ ಸಂಕಲ್ಪ ಮಾಡಿದ್ದಾರೆ. ತಾತ್ಕಾಲಿಕವಾಗಿ ಡಿವಯ್ಡರ್ ಹಾಕ್ತೀವಿ ಅಂತ ಹೇಳಿ ಪರ್ಮನೆಂಟ್ ಡಿವೈಡರ್ ಫಿಕ್ಸ್ ಮಾಡಿದ್ದ ಆರೋಪ ಕೇಳಿ ಬಂದಿದೆ. ಇಡೀ ಊರಿಗೆ ರಸ್ತೆ ಸಂಪರ್ಕ ಬಂದ್ ಮಾಡಿದ್ದಾರೆ ಅಂತ ನಿವಾಸಿಗಳು ಕಿಡಿಕಾರಿದ್ದಾರೆ.
ಚಿಕ್ಕ ಮಕ್ಕಳು ರಸ್ತೆ ದಾಟಲು ಆಗದೇ ಯಾವಾಗ ಏನಾಗುತ್ತೋ ಅನ್ನೋ ಆತಂಕದ ಪರಿಸ್ಥಿತಿ ಉಂಟಾಗಿದೆ. ಡಿವೈಯ್ಡರ್ ಕಿತ್ತು ತೆಗೆಯುವವವರೆಗೆ ಮತ ಕೇಳೋಕೆ ಬರಬೇಡಿ ಅಂತ ಗರಂ ಆಗಿದ್ದಾರೆ.
-ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭ ಯಶವಂತಪುರದ ಕೆಂಗೇರಿ ವಾರ್ಡಿನ ಬಾಬಾ ಸಾಬರ ಪಾಳ್ಯ, ಬಿಡಿಎ ಅಪಾರ್ಟ್ಮೆಂಟ್, ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿತ್ತು. ಬಳಿಕ ಈ ರಸ್ತೆಗೆ ಮರು ಸಂಕಲ್ಪ ಮಾಡಿಲ್ಲ. ಇದರಿಂದ ಸ್ಥಳೀಯರು, ಮಕ್ಕಳು ನಿತ್ಯ ಪರದಾಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ಸಾಕಷ್ಟು ಬಾರಿ ಅಹವಾಲು ಸಲ್ಲಿಸಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾಲಿಕೆಯತ್ತ, ಪಾಲಿಕೆ ಪ್ರಾಧಿಕಾರದತ್ತ ಬೊಟ್ಟು ಮಾಡಿದ್ದಾರೆ! ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಪರಿಸ್ಥಿತಿಯಿದೆ -ಇದೇ ಕಾರಣಕ್ಕೇ ಜನರೆಲ್ಲಾ ವೋಟು ಹಾಕದೇ ಇರಲು ತೀರ್ಮಾನ ಮಾಡಿದ್ದಾರೆ. ಈ ಮೂಲಕವಾದರೂ ಸಂಬಂಧಪ್ಪಟ ಅಧಿಕಾರಿಗಳ ಜನ ಪ್ರತಿನಿಧಿಗಳ ಗಮನ ಸೆಳೆಯುವ ಯತ್ನಿಸಲಾಗಿದೆ.