ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವ ನೀಗಿಸಲು ಹೈರಾಣಾಗಿರುವ ಜಲಮಂಡಳಿ ಇದೀಗ ಹೆಚ್ಚುವರಿಯಾಗಿ ನೀರು ಸಂಗ್ರಹಿಸಿ ಪೂರೈಸಲು ಹೊಸದೊಂದು ದಾರಿ ಕಂಡುಕೊಂಡಿದೆ. ಈ ಮೂಲಕ ನಗರದಲ್ಲಿ ಪೋಲಾಗುತ್ತಿದ್ದ ಸುಮಾರು 8 ಮಿಲಿಯನ್ ಲಕ್ಷ ಲೀಟರ್ ನೀರು ಮರುಬಳಕೆಗೆ ಜಲಮಂಡಳಿ ಮುಂದಾಗಿದೆ.ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ ಬೇಸಿಗೆ ಮಳೆಯೂ ಈ ಬಾರಿ ಕೈಕೊಟ್ಟ ಪರಿಣಾಮ ಬೆಂಗಳೂರಿನಲ್ಲಿ ಸದ್ಯ ಬರ ಪರಿಸ್ಥಿತಿ ತೀವ್ರ ಸ್ಥಿತಿಗೆ ತಿರುಗಿದೆ.
ಇದರಿಂದಾಗಿ ನಗರಕ್ಕೆ ನೀರು ಹೊಂದಿಸುವುದು ಜಲಮಂಡಳಿಗೆ ಸಾಹಸದ ಕೆಲಸವಾಗಿ ಹೋಗಿದೆ.ನೀರು ಪೂರೈಕೆಗೆ ಹೆಚ್ಚುವರಿ ಮೂಲಗಳ ಹುಡುಕಾಟದಲ್ಲಿದ್ದ ಜಲಮಂಡಳಿ ಇದೀಗ ಇತರೆ ಚಟುವಟಿಕೆಗಳ ಬಳಕೆಗಳ ನೀರಿಗಾಗಿ ಹೊಸದೊಂದು ದಾರಿ ಕಂಡು ಹುಡುಕಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಹಲವು ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯ ನೀರನ್ನು ಉತ್ಪತ್ತಿ ಮಾಡುತ್ತವೆ. ಕೆಲವು ದೊಡ್ಡ ಸಂಸ್ಥೆಗಳು ತಮ್ಮದೇ ಇಟಿಪಿ ಹೊಂದಿದ್ದು,
ಅದರ ಮೂಲಕ ಸಂಸ್ಕರಣೆ ಮಾಡುತ್ತಿವೆ. ಹಲವು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಸಂಸ್ಕರಣಾ ವ್ಯವಸ್ಥೆ ಹೊಂದದೆ ಬೇರೆ ಮಾರ್ಗಗಳ ಮೂಲಕ ತ್ಯಾಜ್ಯ ನೀರು ವಿಲೇವಾರಿ ಮಾಡುತ್ತಿವೆ. ಅಲ್ಲದೆ, ನೀರಿಗಾಗಿ ಹೆಚ್ಚಿನ ಹಣ ವೆಚ್ಚ ಮಾಡುತ್ತಿವೆ.ಇದು ಹೆಚ್ಚು ಖರ್ಚು ಆಗುವ ವ್ಯವಸ್ಥೆಯಾಗಿದೆ. ಸಂಸ್ಕರಣೆ ಇಲ್ಲದೆ ಭೂಮಿಗೆ ಸೇರುವ ಕಲುಷಿತ ನೀರಿನಿಂದ ಜಲಮೂಲಗಳು ಹಾಗೂ ಅಂತರ್ಜಲ ಕಲುಷಿತವಾಗುತ್ತಿದೆ. ಜಪಾನ್ನ ಈ ತಂತ್ರಜ್ಞಾನದ ಪ್ರದರ್ಶನವನ್ನು ಏಪ್ರಿಲ್ 23ರಂದು ಆಯೋಜಿಸಲಾಗುವುದು.
ಮೂರು ದಿನ ವಿವಿಧ ಕೈಗಾರಿಕೆಗಳ ಬಾಗಿಲಿಗೆ ತೆರಳಲಿರುವ ‘ಮೊಬೈಲ್ ಇ.ಟಿ.ಪಿ’ ಕೈಗಾರಿಕೆಗಳಿಗಾಗುವ ಅನುಕೂಲದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ತಿಳಿಸಿದರು. ಒಟ್ಟಾರೆ ಬೇಸಿಗೆ ಹೆಚ್ಚಾಗುತ್ತಿದ್ದು ಜನರು ನೀರಿಗೆ ಪರದಾಡುತ್ತಿದ್ದಾರೆ. ಇದರ ನಡುವೆ ಜನರ ಹಿತಕ್ಕಾಗಿ ಮಿತಿಯಿಂದ ನೀರು ಬಳಸಿಕೊಳ್ಳಲು ಹೊಸ ಪ್ಲಾನ್ ಮಾಡಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿಸುತ್ತಾರೆ ಎಂದು ಕಾದು ನೋಡಬೇಕಿದೆ..