ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ ಮಾಡಲಾಗಿದೆ. ಅಶೋಕ್ ತಿರುಪಲಪ್ಪ ವಂಚನೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ವಂಚಕರು ಅಶೋಕ್ ತಿರುಪಲಪ್ಪ ವಾಟ್ಸ್ ಆ್ಯಪ್ಗೆ Www.byc-app.com ಎಂಬ ಲಿಂಕ್ ಅನ್ನು ಕಳುಹಿಸಿ ತೆರೆಯಲು ಹೇಳಿದ್ದಾರೆ. ಬಳಿಕ ಲಿಂಕ್ ಓಪನ್ ಮಾಡಿ ಷೇರು ಖರೀದಿಸುವಂತೆ ಹೇಳಿದ್ದಾರೆ. ಇದರಿಂದ ನಿಮಗೆ ಅಧಿಕ ಲಾಭ ಬರುತ್ತೆ ಎಂದು ನಂಬಿಸಿದ್ದಾರೆ. ಅದರಂತೆ ಅಶೋಕ್ ತಿರುಪಲಪ್ಪ ಅವರು ಲಿಂಕ್ ಓಪನ್ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ.
ಬಳಿಕ ಅಶೋಕ್ ತಿರುಪಲಪ್ಪ ಅವರ ಅಕೌಂಟ್ನಿಂದ ವಂಚಕರು ಹಂತ ಹಂತವಾಗಿ ಹಣ ಕದ್ದಿದ್ದಾರೆ. ವಂಚಕರು ಅಶೋಕ್ ತಿರುಪಲಪ್ಪ ಅಕೌಂಟ್ನಿಂದ ಬರೊಬ್ಬರಿ 5.18 ಕೋಟಿ ಹಣ ದೋಚಿದ್ದಾರೆ. ಘಟನೆ ಸಂಬಂಧ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ