ಬೆಂಗಳೂರು: ದಲಿತ ಹೆಣ್ಣುಮಕ್ಕಳನ್ನ ಮುಸ್ಲಿಂಗೆ ಮತಾಂತರ ಮಾಡುವ ಕೆಲಸ ಆಗುತ್ತಿದೆ. ಇತ್ತೀಚಿಗೆ ಬಾಲಕಿಯೊಬ್ಬಳನ್ನು ಮತಾಂತರ ಮಾಡಿ ಮುಮ್ತಾಜ್ ಎಂಬ ಹೆಸರಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ವೈಯ್ಯಾಲಿಕಾವಲ್ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಲಿ ಆಟವಾಡಿ ಮನೆಗೆ ಬರುವಾಗ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ.
ಮುಸ್ಲಿಂ ಯುವಕನಿಂದ ಕೃತ್ಯ ನಡೆದಿದೆ. ಮೋಹನ್ ನಗರದಲ್ಲಿ ಘಟನೆ ನಡೆದಿದೆ. ಆ ವಿಡಿಯೋ ನಂದಿನಿ ಲೇಔಟ್ ಪೊಲೀಸರಿಗೆ ಕಳುಹಿಸಿದ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದ್ದಾಗಿ ಹೇಳಿದ್ದಾರೆ ಎಂದರು. ಈ ಪ್ರಕರಣವನ್ನು ವಾಪಸ್ ಪಡೆಯದೆ ಹೋದರೆ ಜೈಲಿನಿಂದ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಬಾಲಕಿ ಎಂಟನೇ ತರಗತಿ ಫಸ್ಟ್ ಕ್ಲಾಸ್ ಬಂದಿದೆ.
ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ. ರೇಪ್ ಮಾಡಿದವನಿಗೆ ಮೂರು ಮದುವೆ ಆಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ನಮ್ಮ ಕ್ಷೇತ್ರದಲ್ಲಿ ವೀಲ್ಹಿಂಗ್, ರೇಪ್, ದಬ್ಬಾಳಿಕೆ ನಡೆಯುತ್ತಿದೆ. 50 ರೂ. ಪಡೆಯೋ ಜಾಗಕ್ಕೆ 500 ರೂ. ಪಡೆಯಲಾಗಿದೆ. ಮೂರು ವಾರ್ಡ್ನಲ್ಲಿ ದಿನನಿತ್ಯ ಒಂದಲ್ಲ ಒಂದು ಘಟನೆಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು.