ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಭಂದ ಎನ್ ಐ ಎ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಆರು ತಿಂಗಳಿಂದ ಬೆಂಗಳೂರಿನಲ್ಲೇ ಆರಾಮಾಗಿದ್ದ ಕೊಲೆಗಡುಕ ತೌಸಿಫ್ ಎಂಬ ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ. ಎನ್ ಐಎ ಅಧಿಕಾರಿಗಳು ನಡೆಸಿದ ಇಂಟ್ರೆಸ್ಟಿಂಗ್ ಕಾರ್ಯಚರಣೆ ಹೇಗಿತ್ತು ಗೊತ್ತ? ಈ ಸ್ಟೋರಿ ನೋಡಿ.. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ತೌಫಿಲ್ ನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿರೋ ಮನೆಯೊಂದರಲ್ಲಿ ಎನ್ ಐ ಎ ಅಧಿಕಾರಿಗಳು ತೌಫಿಲ್ ಬಂಧನ ಮಾಡಿದ್ದಾರೆ.ನಿನ್ನೆ ತಡರಾತ್ರಿ ಎನ್ ಐ ತಂಡ ಆರೋಪಿ ತೌಫಿಲ್ ನನ್ನ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಹಂತಕ ತೌಫಿಲ್ ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿ ಇರುವ ಬಗ್ಗೆ ಎನ್ ಐ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕದೆ.ಬಳಿಕ ಎನ್ ಐಎ ಅಧಿಕಾರಿಗಳು ಪ್ಲಂಬರ್ ಹಾಗೂ ಆಟೋ ಚಾಲಕನ ಮಾರುವೇಷದಲ್ಲಿ ಬಂದು ಹಂತಕ ತೌಫಿಲ್ ನನ್ನ ಬಂಧಿಸಿದ್ದಾರೆ.
ತೌಫಿಲ್ ವಾಸವಿದ್ದ ಮನೆ ಬಳಿ ಎನ್ ಐ ಅಧಿಕಾರಿಗಳು ಬಂದಿದ್ದಾರೆ. ಆದ್ರೆ ಹಂತಕ ತೌಫಿಲ್ ಗೆ ಅನುಮಾನ ಬಂದು ಡೋರ್ ಒಳಗಡೆಯಿಂದ ಲಾಕ್ ಮಾಡಿದ್ದಾನೆ. ಎನ್ ಐ ಅಧಿಕಾರಿಗಳು ಡೋರ್ ನ ಲಾಕ್ ಮುರಿದು ಒಳಗಡೆ ಎಂಟ್ರಿಯಾದಗ ತೌಫಿಲ್ ಮಾಂಸ ಕಟ್ಮಾಡುತ್ತಿದ್ದ ಚಾಕುವಿನಿಂದ ಎನ್ ಐಎ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡಿದ್ದಾನೆ.ಹಿಂದೆಯಿಂದ ಹತ್ತುಕ್ಕು ಹೆಚ್ಚು ಮಂದಿ ಏಕಕಾಲಕ್ಕೆ ಮನೆ ಒಳಗೆ ನುಗ್ಗಿ ಆರೋಪಿಗೆ ಲಾಕ್ ಮಾಡಿ ಕೈಗೆ ಕೋಳಾತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಟ್ಟಾರು ಪ್ರಕರಣದ ಹಂತಕರ ಬಗ್ಗೆ ಸುಳಿವು ಕೊಟ್ಟವರಿಗೆ ೫ ಲಕ್ಷ ಬಹುಮಾನ ಕೊಡುವುದಾಗಿ ಈ ಹಿಂದೆ ಎನ್ ಐ ಏ ಘೋಷಣೆ ಮಾಡಿದ್ದರು.ಇದರ ನಡುವೆ ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದ ಎನ್ಐಎ ಅಧಿಕಾರಿಗಳಿಗೆ ತೌಫಿಲ್ ತಗ್ಲಾಕಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.