ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,
ಚೈತ್ರಮಾಸ, ವಸಂತ ಋತು, ಶುಕ್ಲ ಪಕ್ಷ, ಉತ್ತರಾಯಣಂ,
ತಿಥಿ: ಹುಣ್ಣಿಮೆ,
ನಕ್ಷತ್ರ: ಚಿತ್ತ,
ರಾಹು ಕಾಲ: 03:00 ನಿಂದ 04:30 ತನಕ
ಯಮಗಂಡ: 09:00 ನಿಂದ 10:30 ತನಕ
ಗುಳಿಕ ಕಾಲ: 12:00 ನಿಂದ 01:30 ತನಕ
ಅಮೃತಕಾಲ: ಮ.3:27 ನಿಂದ ಸಂ.5:13 ತನಕ
ಅಭಿಜಿತ್ ಮುಹುರ್ತ: ಬೆ.11:49 ನಿಂದ ಮ.12:39 ತನಕ
ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ
ಮೇಷ ರಾಶಿ
ನೀನು ತುಂಬಾ ಪ್ರಯತ್ನಿಸುತ್ತಿದ್ದೀರಿ ಆದರೆ ಅದೃಷ್ಟ ಕೈಕೊಡುತ್ತಿದೆ,
ಉದ್ಯೋಗ ಸಂದರ್ಶನ, ಸರಕಾರಿ ಉದ್ಯೋಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಹತ್ತಿರಕ್ಕೆ ಬಂದು ನಿರಾಶೆ ಮೂಡಲಿದೆ,
ನಿಮ್ಮ ತಾಳ್ಮೆ ಮತ್ತು ಧೈರ್ಯ ಪರೀಕ್ಷೆ ನಡೆಯುತ್ತಿದೆ. ಇಂದು ಆತ್ಮಸ್ಥೈರ್ಯಹೆಚ್ಚಾಗುತ್ತದೆ.
ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರು-ಪೇರು ಸಂಭವ. ಹಣಕಾಸಿನ ಕೊರತೆಯಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಪತ್ನಿಯ ಆರೋಗ್ಯದಲ್ಲಿ ಉತ್ತಮ ಕಾಳಜಿ ಅಗತ್ಯವಿದೆ. ಕಚೇರಿಯಲ್ಲಿ ಪ್ರಮುಖ ಕಾರ್ಯಗಳನ್ನು ನಾಳೆಯವರೆಗೆ ಮುಂದೂಡಿದರೆ, ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗೊಳ್ಳಬಹುದು,
ವೃಷಭ ರಾಶಿ
ಇಂದು ಸಹೋದ್ಯೋಗಿಗಳಿಂದ ಮತ್ತು ಮೇಲಾಧಿಕಾರಿಗಳಿಂದ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಸೃಜನಶೀಲತೆಯನ್ನು ನೋಡಿ ಮೇಲಾಧಿಕಾರಿ ಸಂತೋಷವಾಗಿರುತ್ತಾರೆ, ಅದು ನಿಮಗೆ ಕೆಲಸದಲ್ಲಿ ಬಡ್ತಿ ಪ್ರಯೋಜನಗಳನ್ನು ನೀಡುತ್ತದೆ. ಇಂದು ಸಂಗಾತಿ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ಹೆತ್ತವರ ಪ್ರೀತಿ ಮತ್ತು ಬೆಂಬಲದೊಂದಿಗೆ ಉತ್ಸಾಹ ಹೆಚ್ಚಾಗುತ್ತದೆ, ಅವರ ಮಾರ್ಗದರ್ಶನದಲ್ಲಿ ಇಂದು ಹೂಡಿಕೆ ಮಾಡಿದರೆ ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಲಿದೆ. ನೀವು ಹೊಸ ಕಾರ್ಯವನ್ನು ಪ್ರಾರಂಭಿಸಲು
ಮಿಥುನ ರಾಶಿ
ಕುಟುಂಬದಲ್ಲಿ ಶುಭಮಂಗಲ ಕಾರ್ಯಗಳು ಜರುಗುವುದು. ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ. ನಿಮ್ಮ ಸಂಗಾತಿ ಪ್ರೀತಿಪಾತ್ರರೊಡನೆ ಮೋಜಿನ ದಿನವನ್ನು ಕಳೆಯುತ್ತೀರಿ. ಇಂದು ನೀವು ಸಂಗಾತಿಯೊಂದಿಗಿನ ಎಲ್ಲಾ ಸಹಕಾರ ಪ್ರಾಪ್ತಿ. ಬಹುವರ್ಷಗಳಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ವಿಚಾರ ಸಂಭವ. ನಿಮ್ಮ ಸಂಗಾತಿಯಿಂದ ವಿಶೇಷ ಉಡುಗೊರೆಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಪತ್ನಿಯ ಸಹಕಾರ ಸಂತೋಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನವದಂಪತಿಗಳ ವೈವಾಹಿಕ ಜೀವನವನ್ನು ಸುಧಾರಿಸುವ ನಿಮ್ಮ ಪ್ರಯತ್ನಗಳು ಇಂದು ಯಶಸ್ವಿಯಾಗಲಿವೆ. ನಿಮ್ಮ ಸಂಗಾತಿಯು ಅವರ ಕಠಿಣ ಮನೋಭಾವವನ್ನು ಬಿಟ್ಟು ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಕರ್ಕ ರಾಶಿ
ಇಂದು ನಿಮ್ಮ ಎಲ್ಲಾ ಆಸ್ತಿಯ ಗೊಂದಲಗಳನ್ನು ಪರಿಹರಿಸಲಾಗುವುದು ಮತ್ತು ನಿಮಗೆ ಒಂದು ನಿಟ್ಟುಸಿರು ಸಿಗುತ್ತದೆ. ಈಗಿರುವ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ಪತಿ-ಪತ್ನಿ ಮಧ್ಯೆ ಇದ್ದ ಮುನಿಸು ಪರಿಹರಿಸಲಾಗುವುದು. ನಿಮ್ಮ ಕೆಟ್ಟ ಹವ್ಯಾಸಗಳನ್ನು ಬಿಡಲು ಸೂಕ್ತ ಸಮಯ. ಸಂಗಾತಿಯ ಆಶಆಕಾಂಕ್ಷೆಗಳ ಪೂರೈಸಲು ದಿನವು ಒಳ್ಳೆಯದು. ವೃತ್ತಿರಂಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಯಾವುದೇ ಕೆಲಸವು ಕೆಲವು ಕಾರಣಗಳಿಗಾಗಿ ಸಿಲುಕಿಕೊಂಡಿದ್ದರೆ,
ಸಿಂಹ ರಾಶಿ
ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾನೂನು ವಿಷಯಗಳು ಇಂದು ಪರಿಹರಿಸಲ್ಪಡುವ ಸಾಧ್ಯತೆ. ರಿಯಲ್ ಎಸ್ಟೇಟ್ ವ್ಯವಹಾರ ನಿಮಗೆ ದೊಡ್ಡ ಲಾಭವನ್ನು ನೀಡುತ್ತದೆ. ಇಂದು ನೀವು ಯೋಜಿಸಿದಂತೆ ನಿಮ್ಮ ರಾಜಕೀಯ ಪ್ರವೇಶ ಪೂರ್ಣಗೊಳಿಸಿದರೆ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆ ಇದೆ ಆದರೆ ಕೆಲಸದ ಬದಲಾವಣೆ ಬೇಡ. ಸಹೋದ್ಯೋಗಿಗಳ ಸಹಕಾರ ಅನುಕೂಲಕರವಾಗಿರುತ್ತದೆ. ನಿಮ್ಮ ಮುಖ್ಯಸ್ಥ ಅಥವಾ ಇತರ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತರಾಗುತ್ತಾರೆ. ನಿಮ್ಮ ಪ್ರಯತ್ನ ಸುಧಾರಣೆಯಿಂದಾಗಿ ಅವರ ಆಲೋಚನೆ ನಿಮ್ಮ ಕಡೆಗೆ ಬದಲಾಗುತ್ತದೆ. ವ್ಯಾಪಾರಸ್ಥರು ಉತ್ತಮ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಆರ್ಥಿಕ ರಂಗದಲ್ಲಿ ದಿನವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ನಿಮ್ಮ ಮಗಳಿಗಾಗಿ
ಕನ್ಯಾ ರಾಶಿ
ಸಂಗಾತಿಯೊಂದಿಗಿನ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ.ನೀವು ನಿಮ್ಮ ಕೆಲಸದ ಕಡೆ ಗಮನ ಕೊಡುವುದು ಉತ್ತಮ. ಇಂದು ನೀವು ಕುಟುಂಬದಲ್ಲಿ ಮತ್ತು ವೃತ್ತಿರಂಗದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ಪತ್ನಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ರಂಗದಲ್ಲಿ ಈ ದಿನವು ಮಂದ ಚೇತರಿಕೆ. ಭೂವ್ಯವಹಾರಕ್ಕೆ ಸಂಬಂಧಿಸಿದ ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ನಿಮ್ಮ ಗಳಿಕೆ ಮತ್ತು ಖರ್ಚುಗಳನ್ನು ಸಮತೋಲನಗೊಳಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ನಿಮ್ಮ
ತುಲಾ ರಾಶಿ
ಇಂದು ನೀವು ನಿಮ್ಮ ಮಗಳ ಕುಟುಂಬದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ. ಅಳಿಯನ ಅಸಡ್ಡೆ ವರ್ತನೆ ಮತ್ತು ಮೊಂಡುತನದ ಸ್ವಭಾವವು ನಿಮಗೆ ತೊಮದರೆಯನ್ನು ನೀಡುತ್ತದೆ. ವ್ಯಾಪಾರ ಪಾಲುದಾರರೊಂದಿಗೆ ಲೆಕ್ಕಪತ್ರ ಪರೀಕ್ಷೆ ಮಾಡುವಿರಿ. ನೀವು ಇಂದು ಹೊಸ ಉದ್ಯಮ ಪ್ರಾರಂಭದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹೈನುಗಾರಿಕೆ, ಹಾರ್ಡ್ವೇರ್, ಬಟ್ಟೆ ವ್ಯಾಪಾರ ಭವಿಷ್ಯದಲ್ಲಿ ನಿಮ್ಮ ಉತ್ತಮ ಪ್ರಯೋಜನಗಳನ್ನು ತರುತ್ತದೆ. ಉದ್ಯೋಗಿಗಳು ತಮ್ಮ ಕೆಲಸವನ್ನು ಮರಳಿ ಪಡೆಯಲು
ವೃಶ್ಚಿಕ ರಾಶಿ
ವೈವಾಹಿಕ ಜೀವನದಲ್ಲಿ ಸಮಸ್ಯೆಗಳ ಸಂಭವ. ವೃತ್ತಿರಂಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ನಿಮ್ಮ ಸಂಗಾತಿಯು ಮದುವೆ ಪ್ರಸ್ತಾಪ ಮಾಡುವಳು. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಧನಪ್ರಾಪ್ತಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರಿ ಮತ್ತು ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ.ಅವರು ನಿಮ್ಮ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಬಹುದು ಅಥವಾ ಅದನ್ನು ನಿಮ್ಮ ವಿರುದ್ಧವೇ ಒಳಸಂಚು ಮಾಡುವರು.
ಧನು ರಾಶಿ
ನಿಮ್ಮ ಬಹುದಿನದ ಕೆಲವು ಸಮಸ್ಯೆಗಳು ಇಂದು ಮುಕ್ತಿ. ಸಾಲಗಾರರಿಂದ ಕೊಂಚ ನೆಮ್ಮದಿ. ಪ್ರೇಮಿಗಳ ಮನಸ್ತಾಪ, ಸಮಸ್ಯೆ ಪರಿಹಾರವಾಗಬಹುದು. ಬಹಳ ಸಮಯದ ನಂತರ ಮನೆಯಲ್ಲಿ ಶುಭ ಮಂಗಳ ಕಾರ್ಯಾರಂಭ. ಕುಟುಂಬದ ವಾತಾವರಣವು ಶಾಂತಿಯುತವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಸ್ವಲ್ಪ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ಮಗುವಿನ ಕಡೆಯಿಂದ ಸಂತೋಷ ಸಿಗುತ್ತದೆ. ಉದ್ಯಮಿಗಳು ತಮ್ಮ ಕಠಿಣ ಪರಿಶ್ರಮದಿಂದ ಕೆಲವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ವೃತ್ತಿರಂಗದಲ್ಲಿ ಅನುಕೂಲಕರವಾಗಿದೆ. ಅಲ್ಲಿಯೇ ಮುಂದುವರೆಯಿರಿ. ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆ ಸದ್ಯಕ್ಕೆ ಬೇಡ.
ಮಕರ ರಾಶಿ:
ನಿಮ್ಮ ಹಣಕಾಸಿನ ಪರಿಸ್ಥಿತಿಗಳಲ್ಲಿ ಕೊಂಚ ಚೇತರಿಕೆ. ಸ್ನೇಹಿತರ ಸಹಾಯದಿಂದ ಹೊಸ ಉದ್ಯಮ ಪ್ರಾರಂಭಿಸುವಿರಿ. ಹಣಕಾಸಿನ ಸಾಲ ಪಡೆಯಬಹುದು.ನಿಮ್ಮ ಹೊಸ ಕೆಲಸದಿಂದ ಹೆಚ್ಚುವರಿ ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು. ಭೂ ವ್ಯವಹಾರದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ವಕೀಲರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂತಾನದ ಸಮಸ್ಯೆ ಕಾಡಲಿದೆ .ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ರೋಮ್ಯಾಂಟಿಕ್
ಕುಂಭ ರಾಶಿ
ಮಗಳ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡಲಿದೆ. ಇಂದು ವಿರೋಧಿಗಳು ಹೆಚ್ಚಾಗುವ ಸಾಧ್ಯತೆಯಿದೆ. ಪ್ರೇಮಿಗಳ ಇಬ್ಬರ ನಡುವೆ ನಡೆಯುತ್ತಿರುವ ವ್ಯತ್ಯಾಸಗಳು ಗಾಢವಾಗಬಹುದು ಮತ್ತು ಅದು ಮನೆಯಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇಂತಹ ಸಮಸ್ಯೆಗಳು ನಿಮ್ಮ ಮದುವೆಗೆ ಕಂಟಕ. ಮೇಲಾಧಿಕಾರಿಯ ಕಿರುಕುಳದಿಂದ ನೀವು ಕಚೇರಿಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಹೋದ್ಯೋಗಿಗಳ ಬಗ್ಗೆ ಜಾಗ್ರತೆ ವಹಿಸಿ. ಮಕ್ಕಳ ಅತಿಯಾದ ವಾಹನ ಸವಾರಿ ತಪ್ಪಿಸಲು ಪ್ರಯತ್ನಿಸಿ. ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೆ ನಷ್ಟ ಅನುಭವಿಸುವಿರಿ. ಹಣಕಾಸಿನ ವಿಚಾರದಲ್ಲಿ
ಮೀನ ರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ನೀವು ಇಂದು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮುಂದುವರಿಯಲು ನಿಮಗೆ ಸುವರ್ಣಾವಕಾಶ ಸಿಗಬಹುದು. ಕೆಲಸದ ಸಾಕಷ್ಟು ಒತ್ತಡದಲ್ಲಿ ಕಾರ್ಯನಿರತರಾಗಿದ್ದೀರಿ. ಸಂಗಾತಿ ನಿಮಗೆ ಸಂತೋಷವನ್ನು ನೀಡುವಳು. ಪ್ರೇಮಿಗಳ ಮದುವೆಗೆ ಹಿರಿಯರ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದ ಇರುತ್ತದೆ. ಆರ್ಥಿಕ ವಿಷಯದಲ್ಲಿ ದಿನವು ಅನುಕೂಲಕರವಾಗಿಲ್ಲ. ಸಾಲಗಾರರಿಂದ ತುಂಬಾ ಕಿರಿಕಿರಿ ಸಂಭವ. ಸಮಾಧಾನವೇ ಬ್ರಹ್ಮಸ್ತ್ರ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸುವುದು ಅಂದರೆ