ಹುಬ್ಬಳ್ಳಿಯಲ್ಲಿ ಕೊಲೆಯಾಗಿರುವ ನೇಹಾ ಹಿರೇಮಠ ನಮ್ಮ ಮಗಳು, ಕರ್ನಾಟಕದ ಮಗಳು. ಪೋಷಕರು ತಮ್ಮ ಮಗಳನ್ನು ಕಳೆದುಕೊಡಿದ್ದಾರೆ. ಇದು ಅತ್ಯಂತ ನೋವಿನ ಹಾಗೂ ಭಾವನಾತ್ಮಕ ವಿಷಯ. ದಯಮಾಡಿ ಇದನ್ನು ನಿಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಬೇಡಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಈ ಕೊಲೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಮೂರು ತಿಂಗಳೊಳಗೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ಮಾಡಿ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಕೊಡುವುದು ನಮ್ಮ ಜವಾಬ್ದಾರಿ. ನೇಹಾಗೆ ನ್ಯಾಯ ನೀಡುವುದು ಅತ್ಯಂತ ಮುಖ್ಯವೇ ಹೊರತು, ಕೀಳು ರಾಜಕೀಯವಲ್ಲ. ಆರೋಪಿಗೆ ಭಾರತೀಯ ದಂಡ ಸಂಹಿತೆಯಂತೆ ಶಿಕ್ಷೆ ಜತೆಗೆ, ಮುಂದೆದೂ ಇಂಥ ಘಟನೆ ಮರುಕಳಿಸದಂತೆ ಕಾನೂನು ತಿದ್ದುಪಡಿಯನ್ನೂ ಮಾಡುತ್ತೇವೆ ಎಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.