ಪರ ಪುರುಷನ ಜತೆ ಸಂಬಂಧ ಹೊಂದಿದ್ದ ಶಂಕೆಯಿಂದ ಪ್ರೇಯಸಿಯನ್ನು ಹೊಡೆದು ಸಾಯಿಸಿದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಸಿಂಗಾಪುರ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಎಂ.ಕೃಷ್ಣನ್ ಪ್ರೇಯಸಿ ಮಲ್ಲಿಕಾ ಬೇಗಂ ನನ್ನು ಹೊಡೆದು ಸಾಯಿಸಿದ್ದಾನೆ. ಮಲ್ಲಿಕಾ ಬೇಗಂ ರಹಮಾನ್ಸ್ ಅಬ್ದುಲ್ ರಹಮಾನ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಕೃಷ್ಣನ್ ಆಕೆಯನ್ನು ಒದ್ದಿದ್ದರಿಂದ 2019ರ ಜನವರಿ 17ರಂದು ಆಕೆ ಮೃತಪಟ್ಟಿದ್ದಳು.
ಕೃಷ್ಣನ್ ಸೆರವಾಸ ಅವಧಿ ಆತನ ಬಂಧನದ ದಿನದಿಂದ ಪೂರ್ವಾನ್ವಯವಾಗುತ್ತದೆ. 2018ರಲ್ಲಿ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಆರೋಪದಲ್ಲಿ ಕೃಷ್ಣನ್ ತನ್ನನ್ನು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಪತ್ನಿ ಹಾಗೂ ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ಎಂದು ನ್ಯಾಯಮೂರ್ತಿ ವೆಲೇರಿ ಥಿಯಾನ್ ಹೇಳಿದ್ದಾರೆ.
ಕೃಷ್ಣನ್ ಮಾನಸಿಕ ಕಾಯಿಲೆ ಹಾಗೂ ಆಲ್ಕೋಹಾಲ್ ಕೂಡಾ ಆತನ ಕೃತ್ಯದ ಮೇಲೆ ಪ್ರಭಾವ ಬೀರಿತ್ತು ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ವಿವರಿಸಿದ್ದಾರೆ. ಇದು ವಾಸ್ತವವಾಗಿ ನೈಜ ಹತ್ಯೆ ಪ್ರಕರಣವಾಗಿರದೇ ಪ್ರಮಾದವಶಾತ್ ಹತ್ಯೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.