ರಶ್ಯದ ವೈಮಾನಿಕ ದಾಳಿಯಿಂದ ಉಕ್ರೇನ್ನ ಖಾರ್ಕಿವ್ ನಗರದಲ್ಲಿದ್ದ 240 ಮೀಟರ್ ಎತ್ತರದ ಟಿವಿ ಗೋಪುರ ನೆಲಸಮಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಖಾರ್ಕಿವ್ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ರಶ್ಯ ದಾಳಿ ನಡೆಸುತ್ತಿದೆ. ರಶ್ಯದ ಕ್ಷಿಪಣಿ ದಾಳಿಯಲ್ಲಿ 240 ಮೀಟರ್ ಎತ್ತರದ ಟಿವಿ ಗೋಪುರ ಮುರಿದು ಬಿದ್ದಿದ್ದು ನಗರಕ್ಕೆ ಡಿಜಿಟಲ್ ಟಿವಿ ಸಿಗ್ನಲ್ ಕಡಿತಗೊಂಡಿದೆ. ಕಾರ್ಮಿಕರು ಶೆಲ್ಟರ್ನಲ್ಲಿ ಇದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲ ದಿನಗಳ ಹಿಂದೆ ಇಂಟರ್ನೆಟ್ ವ್ಯವಸ್ಥೆಗೂ ರಶ್ಯದ ದಾಳಿಯಿಂದ ಹಾನಿಯಾಗಿತ್ತು ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ.