ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಮರಣ ಹೊಂದುವ ಸಾಧ್ಯತೆ ಕಡಿಮೆ ಹಾಗೂ ತಕ್ಷಣಕ್ಕೆ ಚೇತರಿಸಿಕೊಳ್ಳುತ್ತಾರೆ ಎಂದು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಅಚ್ಚರಿಯ ವರದಿಯನ್ನು ಪ್ರಕಟಿಸಿದೆ.
ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳಿಗಿಂತ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಕಡಿಮೆ ಮರಣ ಪ್ರಮಾಣ ಹೊಂದಿದ್ದಾರೆ ಎಂದು ಈ ವರದಿಯ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
2016 ರಿಂದ 2019 ರವರೆಗೆ ಆಸ್ಪತ್ರೆಗೆ ದಾಖಲಾದ 458,100 ಮಹಿಳಾ ರೋಗಿಗಳು, ಅದರಲ್ಲೂ 318,800 ಕ್ಕೂ ಹೆಚ್ಚು ಪುರುಷ ರೋಗಿಗಳು ಸೇರಿದಂತೆ 776,000 ಜನರನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದಾಗ ರೋಗಿಗಳಿಗೆ ಕಡಿಮೆ ಮರಣ ಮತ್ತು ತಕ್ಷಣದಲ್ಲಿ ಚೇತರಿಕೆಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ಮಹಿಳಾ ರೋಗಿಗಳ ಮರಣ ಪ್ರಮಾಣವು 8.15% ರಷ್ಟಿದ್ದರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದಿದ ರೋಗಿಗಳು 8.38% ರಷ್ಟಿದೆ. ಇನ್ನು ಇದರಲ್ಲಿ ಮರಣ ಹೊಂದದವರ ಪ್ರಮಾಣವನ್ನು ಹೊಂದಾಣಿಕೆ ಮಾಡಿದ್ರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದದವರು 10.15% ರಷ್ಟು, ಆದರೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದದವರು 10.23% ದಷ್ಟು ಎಂದು ಹೇಳಲಾಗಿದೆ.
ಈ ಅಧ್ಯಯನದಲ್ಲಿ ಮಹಿಳಾ ವೈದ್ಯರು ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಮಹಿಳಾ ವೈದ್ಯರು ರೋಗಿಗಳಿಗೆ ಸಾಮಾಜಿಕ ದೃಷ್ಟಿಕೋನದ ಪ್ರಯೋಜನಗಳನ್ನು ತಿಳಿಸುತ್ತಾರೆ ಎಂದು ಈ ವರದಿ ಹೇಳಿದೆ. ಇದರ ಜತೆಗೆ ಮಹಿಳಾ ವೈದ್ಯರು ತಮ್ಮ ರೋಗಿಗಳಿಗೆ ಹೆಚ್ಚಿನ ಸಮಯ ನೀಡುತ್ತಾರೆ. ಹಾಗೂ ಅವರ ಜತೆಗೆ ತಾಳ್ಮೆ ಮತ್ತು ಅತಿಯಾದ ಪ್ರೀತಿಯಿಂದ ಅವರನ್ನು ಮಾತನಾಡಿಸುತ್ತಾರೆ ಎಂದು ಹೇಳಿದೆ.
ಮಹಿಳಾ ವೈದ್ಯರ ವಾತ್ಸಾಲ್ಯ ರೋಗಿಯಲ್ಲಿ ಹೆಚ್ಚಿನ ಧೈರ್ಯವನ್ನು ತುಂಬುತ್ತದೆ. ಮಹಿಳಾ ವೈದ್ಯರು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುತ್ತಾರೆ. ಇದರಲ್ಲೂ ಮಹಿಳಾ ವೈದ್ಯರು ಮಹಿಳಾ ರೋಗಿಗಳಿಗೆ ಸಿಕ್ಕಾಗ ಸೂಕ್ಷ್ಮ ಪರೀಕ್ಷೆಗಳ ಸಮಯದಲ್ಲಿ ರೋಗಿಗಳಿಗೆ ಉಂಟಾಗಬಹುದಾದ ಮುಜುಗರ, ಅಸ್ವಸ್ಥತೆ, ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದಿಂದ ಮಹಿಳೆ ಮತ್ತು ಪುರುಷ ವೈದ್ಯರ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ. 2002 ರ ಪ್ರತ್ಯೇಕ ಅಧ್ಯಯನವು ಪುರುಷ ವೈದ್ಯರಿಗೆ ಹೋಲಿಸಿದರೆ ಮಹಿಳಾ ವೈದ್ಯರು ರೋಗಿಯೊಂದಿಗೆ ಸರಾಸರಿ 23 ನಿಮಿಷಗಳನ್ನು ಕಳೆಯುತ್ತಾರೆ ಎಂದು ವರದಿ ತಿಳಿಸಿದೆ.