ತುಮಕೂರು : ಕರ್ನಾಟಕದಲ್ಲಿರುವುದು 100% ಕಮಿಷನ್ ಸರ್ಕಾರ, ನಾಯಕರು ಶೇಕಡಾ 100 ರಷ್ಟು ಭ್ರಷ್ಟರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೊರಟಗೆರೆಯಲ್ಲಿ ಪಕ್ಷದ ಕಚೇರಿ ರಾಜೀವ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಖರ್ಗೆ, ‘ಬಿಜೆಪಿ ನಾಯಕರು ಮತ್ತು ಸಚಿವರು ಕಾಮಗಾರಿಗಳ ವೆಚ್ಚವನ್ನು ಶೇಕಡಾ 200 ರಷ್ಟು ಹೆಚ್ಚಿಸಿದ್ದಾರೆ. ಮಂತ್ರಿಗಳು ಶೇ.40ರಷ್ಟು ಕಮಿಷನ್ ಇಟ್ಟುಕೊಂಡು ಉಳಿದ ಶೇ.60ರಷ್ಟನ್ನು ಪಕ್ಷಕ್ಕೆ ನೀಡುತ್ತಾರೆ.
ಮೋದಿ ಮತ್ತು ಅಮಿತ್ ಶಾ ಅವರ ಮೂಗಿನ ಕೆಳಗೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗುತ್ತಿದೆ. ಅವರು ಇಡಿ ಮತ್ತು ಐಟಿ ಏಜೆನ್ಸಿಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಾರೆ. ಭ್ರಷ್ಟ ಬಿಜೆಪಿ ನಾಯಕರ ಮೇಲೆ ಇಡಿ/ ಐಟಿ ದಾಳಿ ಏಕೆ ನಡೆಸಿಲ್ಲ? ಮೋದಿ ಮತ್ತು ಅಮಿತ್ ಶಾ ಮಾತನಾಡಬೇಕು. ಭ್ರಷ್ಟಾಚಾರದಲ್ಲಿ ತೊಡಗಿರುವ ತಮ್ಮ ನಾಯಕರನ್ನು ರಕ್ಷಿಸುವಾಗ ಅವರು ಕಾಂಗ್ರೆಸ್ ಅನ್ನು ಭ್ರಷ್ಟರೆಂದು ಕರೆಯುತ್ತಾರೆ ಎಂದು ಖರ್ಗೆ ಆರೋಪಿಸಿದರು.