ಯಾವುದೇ ತರಕಾರಿಯನ್ನು ಹೆಚ್ಚುವಾಗ ಬರದ ಕಣ್ಣೀರು ಈರುಳ್ಳಿ ಹೆಚ್ಚುವಾಗ ಬೇಡ ಎಂದರೂ ಬರುತ್ತದೆ. ಈರುಳ್ಳಿಯನ್ನು ಕಣ್ಣೀರು ಬರದಂತೆ ಹೆಚ್ಚುವ ಟೆಕ್ನಿಕ್ ಗಳ ಬಗ್ಗೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ನೀವು ಮನೆಯಲ್ಲಿ ಇವುಗಳನ್ನು ಟ್ರೈ ಮಾಡಿ ನೋಡಿ.
ಈರುಳ್ಳಿಯನ್ನು ಒಂದು ಸ್ಲೈಸ್ ಮಾಡಿ ನೀವು ಅದನ್ನು ಗಮನಿಸಿ ನೋಡಿ. ಅದರಲ್ಲಿ ಮೂರು ಪದರಗಳು ಇರುತ್ತವೆ. ಒಳಪದರ, ಮಧ್ಯ ಪದರ ಮತ್ತು ಮೇಲಿನ ಚರ್ಮದ ತರಹ.
ಯಾವಾಗ ನೀವು ಒಳಪದರವನ್ನು ಕಟ್ ಮಾಡುತ್ತೀರಿ, ಆ ಸಂದರ್ಭ ದಲ್ಲಿ ಅದರಿಂದ ಒಂದು ರೀತಿಯ ರಾಸಾಯನಿಕ ಅಂಶ ಬಿಡುಗಡೆ ಯಾಗುತ್ತದೆ.
ಇದು ಗ್ಯಾಸ್ ರೂಪದಲ್ಲಿರುತ್ತದೆ ಎಂದು ಹೇಳುತ್ತಾರೆ. ಇದರ ಒಂದು ವಿಶೇಷ ಗುಣ ಎಂದರೆ ನೀರಿನ ಜೊತೆ ಇದು ಮಿಕ್ಸ್ ಆದಾಗ ಆಸಿಡ್ ಆಗುತ್ತದೆ. ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಕಣ್ಣು ಯಾವಾಗಲೂ ತೇವಾಂಶದಿಂದ ಕೂಡಿರುತ್ತದೆ ಮತ್ತು ಹೆಚ್ಚು ನೀರು ಅಲ್ಲಿರುತ್ತದೆ.
ನಮ್ಮ ಕಣ್ಣೀರಿನ ಜೊತೆ ಈರುಳ್ಳಿಯ ಈ ಗ್ಯಾಸ್ ಮಿಕ್ಸ್ ಆದರೆ ಅದು ಕಣ್ಣಿನ ಉರಿ ಬರುವಂತೆ ಆಗುತ್ತದೆ. ಈ ಸಂದರ್ಭದಲ್ಲಿ ಕಣ್ಣೀರು ಬರು ವುದು ಸಹಜ. ಆದರೆ ನಮಗೆ ಕಣ್ಣೀರು ತರಿಸುವ ಈರುಳ್ಳಿಗೆ ಈ ಕೆಳಗಿನ ರೀತಿಗಳಲ್ಲಿ ನಾವು ಮಾಡಿ ಕಣ್ಣೀರು ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
ನಾವೆಲ್ಲರೂ ಉಸಿರಾಡುವುದು ಮೂಗಿನ ಮೂಲಕ. ಅದು ನಿಮಗೆ ಗೊತ್ತೇ ಇದೆ. ಕೆಲವರು ಬಾಯಲ್ಲೂ ಉಸಿರಾಡುತ್ತಾರೆ. ಅವರನ್ನು ನೋಡಿದರೆ ನಗು ಬರುತ್ತದೆ ನಿಜ. ಆದರೆ ಈರುಳ್ಳಿ ಹೆಚ್ಚುವ ಸಂದರ್ಭದಲ್ಲಿ ಅವರ ಟೆಕ್ನಿಕ್ ನಮಗೆ ಉಪಯೋಗಕ್ಕೆ ಬರುತ್ತದೆ.
ನಾವು ಕೂಡ ಈರುಳ್ಳಿ ಹಚ್ಚುವ ಸಂದರ್ಭದಲ್ಲಿ ಬಾಯಿಯ ಮೂಲಕ ಉಸಿರಾಡುವುದರಿಂದ ಮೂಗಿನ ಹಾಗೂ ಕಣ್ಣೀರಿನ ಗ್ರಂಥಿಗಳಿಗೆ ಈರುಳ್ಳಿಯ ಗ್ಯಾಸ್ ಹೋಗದಂತೆ ತಡೆಯಬಹುದು.
ಬಾಯಿಯ ಮೂಲಕ ಉಸಿರಾಡಬೇಕಾದರೆ ನಾಲಿಗೆಯನ್ನು ಸ್ವಲ್ಪ ಹೊರ ಬಿಡಬೇಕು. ಈ ಸಂದರ್ಭದಲ್ಲಿ ನಾಲಿಗೆಯಲ್ಲಿರುವ ನೀರಿನ ಅಂಶಕ್ಕೆ ಈರುಳ್ಳಿಯ ಗ್ಯಾಸ್ ಅಟ್ರ್ಯಾಕ್ಟ್ ಆಗಿ ಮಿಕ್ಸ್ ಆಗುತ್ತದೆ. ಆಗ ಅದು ನಮ್ಮ ಮೂಗಿಗೆ ಹಾಗೂ ಕಣ್ಣಿಗೆ ಹೋಗುವುದಿಲ್ಲ. ನಮಗೆ ಕಣ್ಣೀರು ಬರುವುದಿಲ್ಲ
ಈರುಳ್ಳಿಯನ್ನು ಹೆಚ್ಚುವ ಮುಂಚೆ ಮಾಡಬಹುದಾದ ಇನ್ನೊಂದು ಟೆಕ್ನಿಕ್ ಎಂದರೆ ಅದು ಈರುಳ್ಳಿಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕುವುದು.
ಮೊದಲಿಗೆ ಈರುಳ್ಳಿಯ ಬುಡವನ್ನು ಕತ್ತರಿಸಿ, ಈರುಳ್ಳಿಯನ್ನು ಹೋಳು ಮಾಡಿ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತು ಬಿಟ್ಟು ಈರುಳ್ಳಿಯನ್ನು ಹೆಚ್ಚುವುದರಿಂದ ಸ್ವಲ್ಪ ಕೂಡ ಕಣ್ಣೀರು ಬರುವುದಿಲ್ಲ.
ಏಕೆಂದರೆ ಈರುಳ್ಳಿಯ ಗ್ಯಾಸ್ ನೀರಿನಲ್ಲಿ ಅದಾಗಲೇ ಮಿಕ್ಸ್ ಆಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಈರುಳ್ಳಿಯನ್ನು ಹೆಚ್ಚುವಾಗ ಸ್ವಲ್ಪ ಜಾಗ್ರತೆ ಇರಲಿ. ಏಕೆಂದರೆ ಈರುಳ್ಳಿ ನೀರಿನಲ್ಲಿ ನೆನೆದಿರುವುದರಿಂದ ಸ್ಲಿಪ್ ಆಗುವ ಸಾಧ್ಯತೆ ಇರುತ್ತದೆ.
ಅಲ್ಲಿ ಇಲ್ಲಿ ಕುಳಿತುಕೊಂಡು ಈರುಳ್ಳಿ ಹೆಚ್ಚುವ ಬದಲು ಆರಾಮಾಗಿ ಸೋಫಾ ಮೇಲೆ ಫ್ಯಾನ್ ಕೆಳಗಡೆ ಕುಳಿತು ಹೆಚ್ಚ ಬಹುದಲ್ಲ!
ಫ್ಯಾನ್ ಗಾಳಿ ಬೀಸುವುದರಿಂದ ಈರುಳ್ಳಿಯ ಗ್ಯಾಸ್ ಅನ್ನು ಅತ್ತಿತ್ತ ಚಲಿಸುವಂತೆ ಮಾಡುತ್ತದೆ. ಇದರಿಂದ ಕಣ್ಣುಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈರುಳ್ಳಿ ಹೆಚ್ಚುವಾಗ ಕಣ್ಣೀರು ಕೂಡ ಬರುವುದಿಲ್ಲ.
ಈರುಳ್ಳಿಯ ಗ್ಯಾಸ್ ಅನ್ನು ವಿನೆಗರ್ ಉಪಶಮನ ಮಾಡುತ್ತದೆ. ಹೀಗಾಗಿ ನೀವು ಈರುಳ್ಳಿ ಹೆಚ್ಚುವ ಮುಂಚೆ ಒಂದು ಬೌಲ್ ನಲ್ಲಿ ನೀರು ತೆಗೆದು ಕೊಂಡು ಅದಕ್ಕೆ ಸ್ವಲ್ಪ ವಿನೆಗರ್ ಮತ್ತು ಉಪ್ಪು ಹಾಕಿ.
ಈರುಳ್ಳಿಯನ್ನು ಹೋಳು ಮಾಡಿ ಇದರಲ್ಲಿ ಸ್ವಲ್ಪ ಹೊತ್ತು ನೆನೆ ಹಾಕಿ. ಇನ್ನೊಂದು ವಿಧಾನ ಎಂದರೆ ನೀವು ಕಟ್ ಮಾಡುವ ಬೋರ್ಡ್ ಮೇಲೆ ಸ್ವಲ್ಪ ವಿನೆಗರ್ ಹಾಕಿ ಸವರಿ ಆನಂತರ ಈರುಳ್ಳಿ ಹೆಚ್ಚಿ. ಇದರಿಂದಲೂ ಕೂಡ ಕಣ್ಣೀರು ಬರುವುದಿಲ್ಲ.
ಮೊದಲೇ ಹೇಳಿದಂತೆ ಈರುಳ್ಳಿಯ ಒಳಪದರದ ಕಾರಣ ಈರುಳ್ಳಿ ಹೆಚ್ಚುವಾಗ ನಮಗೆ ಕಣ್ಣೀರು ಬರುತ್ತದೆ. ಹೀಗಾಗಿ ಇದನ್ನು ತೆಗೆದು ಬಿಡುವುದೇ ವಾಸಿ.
ಹೀಗೆ ಮಾಡಿ ಈರುಳ್ಳಿಯನ್ನು ಕಟ್ ಮಾಡುವುದರಿಂದ ಸಾಮಾನ್ಯವಾಗಿ ಕಣ್ಣೀರು ಬರುವುದಿಲ್ಲ. ಇದು ಬಹಳ ಒಳ್ಳೆಯ ಟೆಕ್ನಿಕ್ ಎಂದು ಹಲವರು ಹೇಳುತ್ತಾರೆ.