ಹಾಸನ : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿ ಕೋಡಿಮಠದ ಶ್ರೀಗಳನ್ನು ಭೇಟಿಯಾಗಿದ್ದಾರೆ.
ರಾಜಕೀಯ ಭವಿಷ್ಯ ನುಡಿಯುವ ಶಿವಾನಂದ ಶಿವಯೋಗಿ ಶ್ರೀಗಳನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸ್ವಾಮೀಜಿ ಬಳಿ ಸಿದ್ದರಾಮಯ್ಯ ಏನಾದರೂ ರಾಜಕೀಯ ಭವಿಷ್ಯ ಕೇಳಿದ್ರಾ..? ಎಂಬ ಪ್ರಶ್ನೆ ಮೂಡಿದೆ.ಸುಮಾರು 1 ಗಂಟೆಗಳ ಕಾಲ ಕೋಡಿಮಠದ ಶ್ರೀ ಗಳ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಶ್ರೀಗಳು ಕೂಡ ಸಿದ್ದರಾಮಯ್ಯಗೆ ಹಾರ ಹಾಕಿ ಸನ್ಮಾನ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಮರುಸ್ಥಾಪಿಸಿದ್ದು ಬಿಜೆಪಿ ಅಲ್ಲ ಕೋರ್ಟ್
ಲೋಕಾಯುಕ್ತ ಮರು ಸ್ಥಾಪಿಸಿದ್ದು ಬಿಜೆಪಿ ಅಲ್ಲ ಕೋರ್ಟ್ ಎಂದು ಸಿಎಂ, ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟುನೀಡಿದ್ದಾರೆ.
ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷ ಆಯ್ತು.., ಮೂರೂವರೆ ವರ್ಷ ಯಾಕೆ ಲೋಕಾಯುಕ್ತ ಮರು ಸ್ಥಾಪಿಸಲಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿ ಸಂಸ್ಥೆ ಮುಚ್ಚಿರಲಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಇದ್ದರು ಎಂದರು. ಕೋರ್ಟ್ ನಲ್ಲಿ ಯಾರೋ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು, ಪಿಐಎಲ್ ವಿಚಾರಣೆ ನಡೆಸಿ ಕೋರ್ಟ್ ಆದೇಶ ನೀಡಿದೆ ಎಂದರು.
ಗುಜರಾತ್, ಗೋವಾದಲ್ಲಿ ಎಸಿಬಿಯನ್ನು ರಕ್ಷಣೆಗೆ ಇಟ್ಟುಕೊಂಡಿದ್ದೀರಾ..? ನಾವು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವು ಮಾಡಿದ್ವಾ..? ಎಸಿಬಿಯನ್ನು ಇವರು ರದ್ದು ಮಾಡಿಲ್ಲ, ಕೋರ್ಟ್ ಮಾಡಿದ್ದು ಎಂದು ಸಿಎಂ, ಬಿಜೆಪಿ ನಾಯಕರ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.