ಹುಬ್ಬಳ್ಳಿ: ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಇತಿಹಾಸದಲ್ಲೇ ದಾಖಲಾಗಿದೆ ಆದರೆ ಕಲಘಟಗಿಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಕಾಟಾಚಾರಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು ಎಂದು ಸಮಾಜದ ಮುಖಂಡರಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ರೀತಿ ಬೇಕಾಬಿಟ್ಟಿ ಮಾಡುವುದು ವೀರಶೈವ ಕುಲಗುರುಗಳಿಗೆ ಅವಮಾನ ಹಾಗೆ ವಿರಶೈವ ಸಮಾಜದ ಯಾವೊಬ್ಬ ಮುಖಂಡರಿಗೆ ಮಾಹಿತಿ ನೀಡಿಲ್ಲ ಹಾಗೆ ಪೂರ್ವಭಾವಿ ಸೌಎ ಕೂಡ ಮಾಡಿಲ್ಲ ಕೇವಲ ಸ್ಥಳೀಯರಲ್ಲಿ ಕೆಲವರನ್ನು ಕರೆದು ಆಚರಣೆ ಮಾಡಿದ್ದಾರೆ. ಎಂದು ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿಸ್ತು ಬದ್ಧತೆಯಿಂದ ಆಚರಿಸಿದೇ ಉಡಾಫೇ ವರ್ತನೆ ಮಾಡಿದೆ ಹಾಗೆ ತಾಲೂಕು ಅರ್ಚಕ ಮತ್ತು ಪುರೋಹಿತ ಸಂಘದ ಪಧಾಧಿಕಾರಿಗಳು ತಹಸೀಲ್ದಾರ್ ವಿರುದ್ದ ಕಿಡಿ ಕಾರಿದರು.
ಧರ್ಮ ಗುರುಗಳಿಗೆ ಅವಮಾನ ಮಾಡುವಲ್ಲಿ ತಹಸೀಲ್ದಾರ್ ಪ್ರಮುಖ ಕಾರಣ ಎಂದು ಅರ್ಚಕ ಮತ್ತು ಪುರೋಹಿತ ಸಂಘದ ಗೌರವಾಧ್ಯಕ್ಷ ಶೇಖರಯ್ಯಸ್ವಾಮಿ ಬೆಂಡಿಗೇರಿಮಠ ಆಕ್ರೋಶ ಹೊರಹಾಕಿದರು ಹಾಗಾಗಿ ಇಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆಗೆ ಸಜ್ಜಾಗಿರುದು ತಿಳೀದುಬಂದಿದೆ.