ನವದೆಹಲಿ: ವಿಕೃತಕಾಮಿಯೊಬ್ಬ ಬೀದಿ ಹೆಣ್ಣು ನಾಯಿಯನ್ನು (Female Dog) ಎಳೆದೊಯ್ದು ಅತ್ಯಾಚಾರ ಎಸಗಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ದೆಹಲಿಯ (Delhi) ಇಂದರ್ ಪುರಿಯಲ್ಲಿ (Inder Puri) ನಡೆದಿದೆ.ಯುವಕನೊಬ್ಬ ಹೆಣ್ಣುನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮುಕ ಯುವಕನನ್ನ ದೆಹಲಿ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ.
ಈತ ಇಂದರ್ಪುರಿಯ ಬಿಬ್ಲಾಕ್ ನಂ.333 ರಲ್ಲಿ ವಾಸವಾಗಿದ್ದಾನೆ. ಕೆಲ ದಿನಗಳ ಹಿಂದೆ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ವೀಡಿಯೋ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಸಂಬಂಧ ಇಂದರ್ ಪುರಿ ಪೊಲೀಸರು ಐಪಿಸಿ (IPC) ಸೆಕ್ಷನ್ 377 (ಅನೈಸರ್ಗಿಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದು, ನಾಯಿ ಆರೈಕೆಗಾಗಿ ಪ್ರಾಣಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.