ಮುಂಬೈ: ನಿಯಮ ಉಲ್ಲಂಘನೆ ಮಾಡಿದ ಮಹಾರಾಷ್ಟ್ರದ (Maharashtra) ಆರು ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿಗಳ ಪರವಾನಗಿಯನ್ನು (Licenses) ಸರ್ಕಾರ ಅಮಾನತುಗೊಳಿಸಿದೆ ಎಂದು ಸಚಿವ ಸಂಜಯ್ ರಾಥೋಡ್ (Sanjay Rathod) ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷದ (BJP) ಶಾಸಕ ಆಶಿಶ್ ಶೇಲಾರ್ ( Ashish Shelar) ಮತ್ತು ಇತರರ ಪ್ರಶ್ನೆಗೆ ಉತ್ತರಿಸುವ ವೇಳೆ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ವಿಧಾನಸಭೆಯಲ್ಲಿ 6 ಕೆಮ್ಮಿಗೆ ಔಷಧ ತಯಾರಿಸುವ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಿರುವ ಬಗ್ಗೆ ಮಾಹಿತಿ ನೀಡಿದರು.
ಅವುಗಳಲ್ಲಿ ನಾಲ್ಕಕ್ಕೆ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪೈಕಿ 84 ಕಂಪನಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ ಎಂದು ರಾಥೋಡ್ ಹೇಳಿದರು.ಭಾರತೀಯ ಜನತಾ ಪಕ್ಷದ (BJP) ಶಾಸಕ ಆಶಿಶ್ ಶೇಲಾರ್ ( Ashish Shelar) ಮತ್ತು ಇತರರ ಪ್ರಶ್ನೆಗೆ ಉತ್ತರಿಸುವ ವೇಳೆ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ವಿಧಾನಸಭೆಯಲ್ಲಿ ಈ ಮಾಹಿತಿ ನೀಡಿದರು.
ಆರು ಕಂಪನಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ಅವುಗಳಲ್ಲಿ ನಾಲ್ಕಕ್ಕೆ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪೈಕಿ 84 ಕಂಪನಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ ಎಂದು ರಾಥೋಡ್ ಹೇಳಿದರು. ಜೊತೆಗೆ ನಿಯಮಗಳ ಉಲ್ಲಂಘನೆಗಾಗಿ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಚಿವರು ಹೇಳಿದರು.