ನಾವು ದಿನನಿತ್ಯ ಬಳಸುವ ಅನೇಕ ಪದಾರ್ಥಗಳು ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಅಂತಹದೇ ಶಕ್ತಿ ಮಸಾಲೆ ಪದಾರ್ಥಗಳಲ್ಲಿ ಒಂದಾದ ಏಲಕ್ಕಿಯಲ್ಲಿದೆ. ಇದನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರುತ್ತದೆ.
ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ: ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಇದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಮಲಬದ್ಧತೆ, ಆಮ್ಲೀಯತೆ, ಗ್ಯಾಸ್, ಹೊಟ್ಟೆ ಉಬ್ಬುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಣ: ಸಾಮಾನ್ಯ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಏಲಕ್ಕಿ ಸಹಾಯ ಮಾಡುತ್ತದೆ. ಆಹಾರದಲ್ಲಿ ಏಲಕ್ಕಿಯನ್ನು ನಿಯಮಿತ ಬಳಕೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾಯಿ ದುರ್ವಾಸನೆ ತಡೆ: ಏಲಕ್ಕಿ ತಿನ್ನುವುದರಿಂದ ದುರ್ವಾಸನೆ ನಿವಾರಿಸಲು ಹಾಗೂ ಹಲ್ಲಿನ ಆರೋಗ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಊಟವಾದ ನಂತರ ಪ್ರತಿನಿತ್ಯ ಒಂದು ಏಲಕ್ಕಿಯನ್ನು ತಿನ್ನುವುದರಿಂದ ನಿಮ್ಮ ಬಾಯಿಯಿಂದ ದುವಾರ್ಸನೆ ಬರದಂತೆ ತಡೆಗಟ್ಟುತ್ತದೆ. ಏಲಕ್ಕಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣವಿದ್ದು, ಇದರಿಂದಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯ ವಾಸನೆಯನ್ನು ತೆಗೆಯಲು ಸಹಾಯ ಮಾಡುತ್ತದೆ.
ಖಿನ್ನತೆಯನ್ನು ಕಡಿಮೆ ಮಾಡುತ್ತೆ: ಏಲಕ್ಕಿಯ ಪರಿಮಳಯುಕ್ತ ಗುಣಲಕ್ಷಣಗಳಿಂದಾಗಿ ಮಾನಸಿಕ ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡಲು ಹೆಚ್ಚು ಪ್ರಯೋಜನಾಕಾರಿಯಾಗಿದೆ. ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಅಥವಾ ಅದನ್ನು ನಿಮ್ಮ ಚಹಾಕ್ಕೆ ಸೇರಿಸಿ ಇದರ ರುಚಿ ಮತ್ತು ಪರಿಮಳವು ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಸಹಾಯವಾಗಿದೆ.
ತೂಕ ಕಡಿಮೆ ಮಾಡಲು ಸಹಾಯ: ಏಲಕ್ಕಿಯು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಕಿಬ್ಬೊಟ್ಟೆಯಲ್ಲಿ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಕೊಬ್ಬು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದನ್ನು ಹೋಗಲಾಡಿಸಿ ತೂಕ ಕಡಿಮೆ ಮಾಡುತ್ತದೆ.