ಭೋಜಪುರಿ ಸಿನಿಮಾ ರಂಗದ ಖ್ಯಾತನಟ ಹಾಗೂ ಬಿಜೆಪಿ ಮುಖಂಡ ರವಿ ಕಿಶನ್ ವಿರುದ್ಧ ನಟಿಯೊಬ್ಬರು ಆರೋಪ ಮಾಡಿದ್ದಾರೆ. ನಟಿ ಶಿನೋವಾ ಮತ್ತು ಆಕೆಯ ತಾಯಿ ಇಬ್ಬರೂ ರವಿ ಕಿಶನ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ನನಗೆ ಮಗಳನ್ನು ಕೊಟ್ಟು ರವಿ ಕೈ ಕೊಟ್ಟಿದ್ದಾರೆ ಎಂದು ಮೊನ್ನೆಯಷ್ಟೇ ಶಿನೋವಾ ತಾಯಿ ಅಪರ್ಣಾ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.
ರವಿ ಕಿಶನ್ ತನ್ನ ತಂದೆ ಎಂದು ಭೋಜಪುರಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಶಿನೋವಾ ಕೋರ್ಟ್ ಮೆಟ್ಟಿಲು ಏರಿದ್ದರು, ರವಿ ಕಿಶನ್ ನನ್ನ ತಂದೆ ಎಂದು ಸಾಬೀತು ಪಡಿಸೋದಕ್ಕಾಗಿ ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದು ನಟಿ ಹೇಳಿದ್ದರು. ಡಿಎನ್ಎ ಚೆಕ್ ಮಾಡಿಸೋಕಾಗಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿಯನ್ನೂ ಅವರು ಸಲ್ಲಿಸಿದ್ದು, ಇದೀಗ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಶಿನೋವಾ ಹಾಗೂ ಆಕೆಯ ತಾಯಿ ಮಾಡಿರುವ ಆರೋಪವನ್ನು ರವಿ ಕಿಶನ್ ನಿರಾಕರಿಸುತ್ತಲೇ ಬಂದಿದ್ದಾರೆ. ದುಡ್ಡಿಗಾಗಿ ತಾಯಿ ಮತ್ತು ಮಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 20 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಕಿಶನ್ ಪರ ವಕೀಲರು ಹೇಳಿದ್ದಾರೆ.