ಇಸ್ರೇಲ್ ಜೊತೆ ಇದುವರೆಗೆ ನಡೆದ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ ಸಂಗ್ರಹವಾದ ತ್ಯಾಜ್ಯದ ಪ್ರಮಾಣ ಬರೋಬ್ಬರಿ 3.70 ಕೋಟಿ ಟನ್ ಆಗಿದೆ.
ಈ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿದ್ದು, ಇಷ್ಟೊಂದು ಪ್ರಮಾಣದಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕನಿಷ್ಟ ನೂರು ಟ್ರಕ್ ಬಳಸಿಕೊಂಡರೂ ಮುಂದಿನ 14 ವರ್ಷಗಳೇ ಬೇಕಾಗಬಹುದು ಎಂದಿದೆ.
ಇನ್ನು ಈ ಅಂಕಿಅಂಶಗಳಲ್ಲಿ ಸ್ಫೋಟವಾಗದೆ ಉಳಿದಿರುವ ಬಾಂಬ್ಗಳು, ಇತರ ಸ್ಫೋಟಕಗಳು ಒಳಗೊಂಡಿಲ್ಲ. ಆದರೆ ಭೂಸೇನೆಯ ಶೇಕಡ 10ರಷ್ಟು ಶಸ್ತ್ರಾಸ್ತ್ರಗಳು ನಿಷ್ಕ್ರಿಯಗೊಂಡಿವೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಾಜಾದ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಇಸ್ರೇಲ್ ದಾಳಿಯಿಂದಾಗಿ ಈವರೆಗೆ 34,305 ಪ್ಯಾಲೇಸ್ಟಿಯನ್ನರು ಮೃತಪಟ್ಟು, 77,293 ಮಂದಿ ಗಾಯಗೊಂಡಿದ್ದಾರೆ. ಈ ಯುದ್ಧದಲ್ಲಿ 23 ಲಕ್ಷ ಜನ ನಿರಾಶ್ರಿತರಾಗಿದ್ದಾರೆ.