ನಟಿ ಶ್ರುತಿ ಹಾಸನ್ ಹಾಗೂ ಶಾಂತನು ಹಜಾರಿಕಾ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದು ಲಿವಿಂಗ್ ಟುಗೆದರ್ನಲ್ಲಿ ಇದ್ದರೆ ಎಂದು ಹೇಳಲಾಗುತ್ತಿತ್ತು. ಸದ್ಯ ಶಾಂತನು ಹಾಗೂ ಶ್ರುತಿ ಹಾಸನ್ ಪ್ರೇಮದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನಡೆದುಕೊಂಡಿರೋ ರೀತಿಯೇ ಈ ಅನುಮಾನಕ್ಕೆ ಕಾರಣವಾಗಿದೆ.
ಶ್ರುತಿ ಹಾಸನ್ ಅವರು ಹಾಗೂ ಶಾಂತನು ಈ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಇಬ್ಬರೂ ಅನ್ಫಾಲೋ ಮಾಡಿಕೊಂಡಿದ್ದಾರೆ. ಜೊತೆಗೆ ಶಾಂತನು ಜೊತೆಗಿನ ಫೋಟೋಗಳನ್ನು ಶ್ರುತಿ ಹಾಸನ್ ಡಿಲೀಟ್ ಮಾಡಿದ್ದಾರೆ. ಇದರಿಂದ ಇವರ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರೋ ಓರಿ ಅಲಿಯಾಸ್ ಅವತ್ರಮಣಿ ಅವರು ಶಾಂತನು ಅವರನ್ನು ಶ್ರುತಿ ಹಾಸನ್ ಪತಿ ಎಂದು ಕರೆದಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ಸ್ಪಷ್ಟನೆ ನೀಡಿದ್ದ ಶ್ರುತಿ ಅವರು, ಇದು ಸುಳ್ಳು ಎಂದಿದ್ದರು. ಇವರು ಮದುವೆ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಹೀಗಿರುವಾಗಲೇ ಇವರ ಮಧ್ಯೆ ವೈಮನಸ್ಸು ಹುಟ್ಟಿಕೊಂಡಿದೆ.
ಶ್ರುತಿ ಹಾಸನ್ಗೆ ಇದು ಆರನೆಯ ಬ್ರೇಕಪ್ ಆಗಿದೆ. ಈ ಮೊದಲು ಶ್ರುತಿ ಹಾಸನ್ ತಮಿಳು ನಟ ಸಿದ್ದಾರ್ಥ್ ಜೊತೆ ಪ್ರೀತಿಯಲ್ಲಿದ್ದರು. ಆ ಬಳಿಕ ಧನುಷ್, ನಾಗ ಚೈತನ್ಯ, ಕ್ರಿಕೆಟರ್ ಸುರೇಶ್ ರೈನಾ ಜೊತೆಯೂ ಶ್ರುತಿ ಸುತ್ತಾಟ ನಡೆಸಿದ್ದಾರೆ ಎನ್ನಲಾಗಿತ್ತು. ಇದನ್ನು ಶ್ರುತಿ ಸುಳ್ಳು ಎಂದಿದ್ದರು. ನಂತರ ಮೈಕಲ್ ಕೋರ್ಸಲ್ ಜೊತೆ ಶ್ರುತಿ ಮೂರು ವರ್ಷ ಡೇಟಿಂಗ್ ನಡೆಸಿದ್ದರು. 2021ರಿಂದ ಶ್ರುತಿ ಹಾಗೂ ಶಾಂತನು ಒಟ್ಟಾಗಿದ್ದು ಇದೀಗ ಇವರದ್ದೂ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ.