ಪಶ್ಚಿಮ ಕಾಂಬೋಡಿಯಾದ ಸೇನಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 20 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ತಿಳಿಸಿದ್ದಾರೆ.
ಪ್ರಧಾನಿ ಹನ್ ಮಾನೆಟ್ ಅವರು ಫೇಸ್ಬುಕ್ನಲ್ಲಿ ಘಟನೆಯನ್ನು ವರದಿ ಮಾಡಿದ್ದು, ಯೋಧರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 27, 2024 ರ ಶನಿವಾರ ಮಧ್ಯಾಹ್ನ ಕಂಪಾಂಗ್ ಸ್ಪ್ಯೂ ಪ್ರಾಂತ್ಯದ ಮಿಲಿಟರಿ ವಿಲೇಜ್ 3 ರಲ್ಲಿ ಸ್ಫೋಟ ಸಂಭವಿಸಿದೆ ಎಂದು ಕೇಳಿದಾಗ ನನಗೆ ಆಘಾತವಾಯಿತು. ಈ ಘಟನೆಯಲ್ಲಿ 20 ಸೈನಿಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಘಟನೆಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ.
ದುರಂತದಲ್ಲಿ ಮಡಿದ ಸೈನಿಕರ ಅಂತ್ಯಕ್ರಿಯೆಯ ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. ಘಟನೆಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ತಲಾ 20 ಮಿಲಿಯನ್ ಡಾಲರ್ ಹಾಗೂ ಗಾಯಗೊಂಡ ಸೈನಿಕರಿಗೆ 20 ಮಿಲಿಯನ್ ರಿಯೆಲ್ ನೆರವು ನೀಡುವುದಾಗಿ ಘೋಷಿಸಿದ್ದಾರೆ.