ಬೆಂಗಳೂರು:- ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ವಿಚಾರ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಪಾರ್ಕ್ ಮಾಡಿ ಐದಾರು ತಿಂಗಳಾದರೂ ಬೈಕ್ಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ಅನುಮಾನ ಮೂಡಿ ಅಲ್ಲಿನ ಸಿಬ್ಬಂದಿ ಸುಮಾರು 30 ಬೈಕ್ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಿಂದೆ ಬೈಕ್ ಕಳ್ಳತನ ಮಾಡಿದ ಬಳಿಕ ಕಳ್ಳರು ಬೈಕಿನ ಜೊತೆಯೇ ಪರಾರಿಯಾಗುತ್ತಿದ್ದರು. ಆದರೆ ಈಗ ಸಿಸಿಟಿವಿಗಳು ಎಲ್ಲೆಡೆ ಇರುವ ಕಾರಣ ಸುಲಭವಾಗಿ ಸಿಕ್ಕಿ ಬಿಳುತ್ತಿದ್ದಾರೆ. ಹೀಗಾಗಿ ಬಂಧನಗೊಳ್ಳುವ ಭಯದಲ್ಲಿ ಪಾರ್ಕಿಂಗ್ನಲ್ಲಿ ಕಳ್ಳರು ಬೈಕ್ ಪಾರ್ಕ್ ಮಾಡಿ ಹೋಗುತ್ತಿದ್ದಾರೆ. ಈ ರೀತಿ ಪಾರ್ಕ್ ಮಾಡಿ ಹೋದವರು ಆರು ತಿಂಗಳು ಕಳೆದರು ಮರಳಿ ಬರದೇ ಇರುವ ಕಾರಣ ಪಾರ್ಕಿಂಗ್ ಸಿಬ್ಬಂದಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಕೆಲವು ಬೈಕ್ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾರ್ಕಿಂಗ್ ಸಿಬ್ಬಂದಿ ಒಪ್ಪಿಸಿರುವ ಬೈಕ್ಗಳಲ್ಲಿ ಐದಕ್ಕೂ ಹೆಚ್ಚು ಬೈಕ್ಗಳು ಕಳ್ಳತನವಾಗಿದ್ದು ಎಂದು ತಿಳಿದು ಬಂದಿದೆ.