ಬೆಂಗಳೂರು: ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಪ್ರಧಾನಿ ಮೋದಿ ಐಟಿಸಿ ಹೋಟೆಲ್ನಿಂದ ಮಾಲಿನಿ ಸಿಟಿವರೆಗೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. ಹೀಗಾಗಿ ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪುಣೆಯಿಂದ ಬೆಳಗಾವಿಗೆ ಬರುವ ವಾಹನಗಳಿಗೆ ಸಂಕೇಶ್ವರ ಹುಕ್ಕೇರಿ ಮಾರ್ಗ ಬಳಸಿಕೊಳ್ಳಲು ಸೂಚಿಸಲಾಗಿದೆ. ಬಾಗಲಕೋಟೆಯಿಂದ ಬೆಳಗಾವಿಗೆ ಬರುವ ವಾಹನಗಳು ನೇಸರಗಿ-ಗೋಕಾಕ್ ಮೂಲಕ ಸಂಚರಿಸಬೇಕು. ಧಾರವಾಡದಿಂದ ಬೆಳಗಾವಿಗೆ ಬರುವ ವಾಹನಗಳು ನೇಗಿನಗಾಳ-ನೇಸರಗಿ ಮೂಲಕ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮನವಿ ಮಾಡಿದ್ದಾರೆ.