ಬೆಂಗಳೂರು: ವಿಡಿಯೋದಲ್ಲಿ ಇರುವ ರಾಜಕೀಯ ನಾಯಕ ದೇಶ ಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ. ಹೀಗಾಗಿ SIT ಕ್ರಮಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಡಿಯೋದಲ್ಲಿ ಇರುವ ರಾಜಕೀಯ ನಾಯಕ ದೇಶ ಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
ಹೀಗಾಗಿ SIT ಕ್ರಮಕೈಗೊಳ್ಳಲಿದೆ, ಅವರನ್ನು ಕರೆ ತರುವ ಪ್ರಯತ್ನ ಮಾಡಿ, ತನಿಖೆ ಪ್ರಾರಂಭಿಸುತ್ತೇವೆ. ಮಹಿಳಾ ಆಯೋಗಕ್ಕೆ ಹಾಸನ ಜಿಲ್ಲೆಯ ನೊಂದ ಮಹಿಳೆಯರು ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸಿಎಂಗೆ ಮತ್ತು ನನಗೆ ಪತ್ರ ಬರೆದಿದ್ದಾರೆ ಎಂದರು.
ಮಹಿಳಾ ಆಯೋಗ ಪತ್ರ ಬರೆದಾಗ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಪೆನ್ ಡ್ರೈವ್ ವಿಚಾರ ಈಗ ಬೆಳಕಿಗೆ ಬಂದಿದೆ, ಹೀಗಾಗಿ ಈಗ ಕ್ರಮ ಕೈಗೊಂಡಿದ್ದೇವೆ. ಪೆನ್ ಡ್ರೈವ್ ವಿಚಾರ ತನಿಖೆಯಲ್ಲಿ ಹೊರ ಬರುತ್ತೆ. ಯಾರ ಪಾತ್ರ ಇದೆ ಅನ್ನೋದು ತಿಳಿಯುತ್ತೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.