ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡುವ ಮೊಸರು ಬೇಸಿಗೆ ಸಂದರ್ಭದಲ್ಲಿ ಹಾಗೆ ತಿಂದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮೊಸರಿನ ಜೊತೆ ಇವುಗಳನ್ನು ಸೇರಿಸಿ ಮಾತ್ರ ತಿನ್ನಬಾರದಂತೆ.
ಈರುಳ್ಳಿ ಮತ್ತು ಮೊಸರು ಒಂದಕ್ಕೊಂದು ಹೊಂದುವುದಿಲ್ಲ ಎಂದು ಹಲವರು ಹೇಳುತ್ತಾರೆ. ಮೊಸರಿನ ಜೊತೆ ಈರುಳ್ಳಿ ಸೇವನೆಯಿಂದ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಈ ಕಾಂಬಿನೇಷನ್ ಆಹಾರಗಳು ಸೇವಿಸಬಾರದು ಎಂಬುದು ಆರೋಗ್ಯ ತಜ್ಞರ ಸಲಹೆ.
ನಮ್ಮ ದೇಹದಲ್ಲಿ ಆಮ್ಮಿಯತೆ ಪ್ರಮಾಣವನ್ನು ಹಾಲು ಹೆಚ್ಚು ಮಾಡುತ್ತದೆ. ಮೊಸರಿನ ಜೊತೆ ಸೇವಿಸಿದ ಸಂದರ್ಭದಲ್ಲಿ ಎದೆಯುರಿ ಮತ್ತು ಹೊಟ್ಟೆ ಉಬ್ಬರ ಕೂಡ ಕಾಣಿಸುತ್ತದೆ. ಹಾಗಾಗಿ ಹಾಲು ಮತ್ತು ಮೊಸರು ಸೇವಿಸಲು ಒಳ್ಳೆಯ ಕಾಂಬಿನೇಷನ್ ಆಹಾರಗಳಲ್ಲ
ಮೀನು ಮತ್ತು ಮೊಸರು ಒಟ್ಟಿಗೆ ಸೇರಿದರೆ ಮಾಂಸಹಾರ ಮತ್ತು ಸಸ್ಯಹಾರ ಪ್ರೋಟೀನ್ ಒಟ್ಟಿಗೆ ಬೆರತಂತೆ. ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಉಂಟಾಗುತ್ತವೆ.
ಉದ್ದಿನಬೇಳೆ ಹಾಗೂ ಅದರ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆ ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆ ಉಬ್ಬರ, ವಾಂತಿ ಭೇದಿ ಇತ್ಯಾದಿ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮಾವಿನ ಹಣ್ಣಿನ ಬಗ್ಗೆ ನಿಮಗೆ ಬೇರೆ ಹೇಳಬೇಕಾಗಿಲ್ಲ. ಮಾವಿನ ಹಣ್ಣು ನಮ್ಮ ದೇಹಕ್ಕೆ ಉಷ್ಣದ ಪ್ರಭಾವ ಉಂಟುಮಾಡುತ್ತದೆ. ಆದರೆ ಮೊಸರು ಇದಕ್ಕೆ ವಿರುದ್ಧ. ಅಂದರೆ ತಂಪು ನೀಡುತ್ತದೆ. ಹಾಗಾಗಿ ಇವೆರಡನ್ನು ಒಟ್ಟಿಗೆ ಸೇರಿಸಿದಾಗ ಇದು ಅಜೀರ್ಣತೆ ಸಮಸ್ಯೆ ತಂದು ಕೊಡಬಹುದಾದ ಸಾಧ್ಯತೆ ಇರುತ್ತದೆ.